ಅಮೆರಿಕದಲ್ಲಿ ಗರ್ಭಪಾತ ಹಕ್ಕು ರದ್ದತಿಗೆ ವಿರೋಧ: ಆಸ್ಟ್ರೇಲಿಯಾದಲ್ಲಿ ಬೃಹತ್ ಪ್ರತಿಭಟನೆ

Update: 2022-07-02 15:52 GMT

ಸಿಡ್ನಿ, ಜು.2: ಗರ್ಭಪಾತಕ್ಕೆ ಮಹಿಳೆಯರ ಸಾಂವಿಧಾನಿಕ ಹಕ್ಕನ್ನು ಅಮೆರಿಕದ ಸುಪ್ರೀಂಕೋರ್ಟ್ ರದ್ದುಗೊಳಿಸಿರುವುದನ್ನು ವಿರೋಧಿಸಿ ಶನಿವಾರ ಆಸ್ಟ್ರೇಲಿಯಾದಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು ಸುಮಾರು 15,000 ಮಂದಿ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.

 ಅಮೆರಿಕದ ಕೋಟ್ಯಾಂತರ ಮಹಿಳೆಯರ ಹಕ್ಕನ್ನು ಅವರಿಂದ ಕಸಿದುಕೊಳ್ಳಲಾಗಿದ್ದು ಇದರಿಂದ ನಾವು ಆಕ್ರೋಶಗೊಂಡಿದ್ದೇವೆ. ಆಸ್ಟ್ರೇಲಿಯಾ ಹಾಗೂ ವಿಶ್ವದಾದ್ಯಂತ ಮಹಿಳೆಯರ ಹಕ್ಕನ್ನು ಬೆಂಬಲಿಸಲು ನಾವಿಲ್ಲಿ ಒಟ್ಟುಗೂಡಿದ್ದೇವೆ ಎಂದು ಮೆಲ್ಬೋರ್ನ್ನಲ್ಲಿ ಪ್ರತಿಭಟನೆ ಆಯೋಜಿಸಿದ್ದ ಲಿರ್ ವಾಲ್ಶ್ ಹೇಳಿದ್ದಾರೆ.
 

‘ನಾನು ಈ ಗುರುತನ್ನು ನನ್ನ ಅಜ್ಜಿಯಿಂದ ಎರವಲು ಪಡೆದಿದ್ದೇನೆ, ಪ್ರತಿಯೊಬ್ಬರೂ ದೈಹಿಕ ಸ್ವಾಯತ್ತತೆಗೆ ಅರ್ಹರು’ ಮುಂತಾದ ಘೋಷಣೆಗಳ ಫಲಕಗಳನ್ನು ಹಿಡಿದು ಮಹಿಳೆಯರು, ಪುರುಷರ ಸಹಿತ ಸುಮಾರು 15,000 ಮಂದಿ ರ್ಯಾಲಿ ನಡೆಸಿದರು.
 ಗರ್ಭಪಾತವು ಆರೋಗ್ಯ ರಕ್ಷಣೆಯ ಕ್ರಮವಾಗಿದೆ ಮತ್ತು ಪ್ರತೀ ಮಹಿಳೆಯೂ ಅದಕ್ಕೆ ಅರ್ಹಳು. ಅಮೆರಿಕದ ಮಹಿಳೆಯರ ಹಕ್ಕುಗಳ ಪರ ನಾವಿದ್ದೇವೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. 

ಅಮೆರಿಕದಂತೆ, ಆಸ್ಟ್ರೇಲಿಯಾದಲ್ಲೂ ಗರ್ಭಪಾತಕ್ಕೆ ಸಂಬಂಧಿಸಿ ಕಾನೂನನ್ನು ರೂಪಿಸುವ ಹಕ್ಕು ರಾಜ್ಯ ಸರಕಾರಗಳ ಕೈಯಲ್ಲಿದೆ. ಆಸ್ಟ್ರೇಲಿಯಾದ ಅತ್ಯಧಿಕ ಜನಸಂಖ್ಯೆಯ ನಗರ ನ್ಯೂ ಸೌತ್ ವೇಲ್ಸ್‌ ನಲ್ಲಿ ಮಾತ್ರ ಗರ್ಭಪಾತವನ್ನು ಕಾನೂನುಬದ್ಧಗೊಳಿಸಲಾಗಿದೆ. ದಕ್ಷಿಣ ಆಸ್ಟ್ರೇಲಿಯಾದಲ್ಲಿ ಖಾಸಗಿ ಗರ್ಭಪಾತ ಕೇಂದ್ರಗಳನ್ನು ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News