ಶ್ರೀಲಂಕಾ: 'ಪ್ರವಾಸಿ ತಾಣ'ವಾಗಿ ಬದಲಾದ ರಾಷ್ಟ್ರಪತಿ ಭವನ!

Update: 2022-07-10 07:18 GMT
Photo:twitter

ಕೊಲಂಬೊ: ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ಶನಿವಾರ ಕೊಲಂಬೊದಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದ ಒಂದು ದಿನದ ನಂತರ ರಾಷ್ಟ್ರಪತಿ ಭವನವು ಈಗ "ಪ್ರವಾಸಿ ತಾಣ" ವಾಗಿ ಬದಲಾಗಿರುವುದು ಕಂಡುಬಂದಿದೆ. ಅಧ್ಯಕ್ಷರ ರಾಜೀನಾಮೆಯ ಅಧಿಕೃತ ಸುದ್ದಿಗಾಗಿ ಕಾಯುತ್ತಿರುವ  ಜನರು ಅಧ್ಯಕ್ಷರ ಭವನದ ಕಾಂಪೌಂಡ್ ಸುತ್ತಲೂ ಗಿರಕಿ ಹೊಡೆಯುವುದು ಕಂಡುಬಂದಿದೆ ಎಂದು India Today ವರದಿ ಮಾಡಿದೆ.

ಸ್ಥಳೀಯರು ಅಧ್ಯಕ್ಷರ ಭವನದಲ್ಲಿರುವ  ಈಜು  ಕೊಳದಲ್ಲಿ ಈಜುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ರಾಷ್ಟ್ರ ಭವನದಲ್ಲಿ ಜಮಾಯಿಸಿದ ಜನರಿಗೆ ಊಟ, ನೀರು ಒದಗಿಸಲಾಗುತ್ತಿದೆ. ಒಂದು ಕಾಲದಲ್ಲಿ ದೇಶದಲ್ಲೇ ಅತ್ಯಂತ ಹೆಚ್ಚು ಕಾವಲು ಕಾಯುತ್ತಿದ್ದ ರಾಷ್ಟ್ರಪತಿ ಭವನ ಈಗ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಅಧ್ಯಕ್ಷರು ರಾಜೀನಾಮೆ ನೀಡುವವರೆಗೂ ಸ್ಥಳದಿಂದ ಕದಲಲು  ನಿರಾಕರಿಸಿರುವ ಪ್ರತಿಭಟನಾಕಾರರು  “ಗೋತ ಮನೆಗೆ ಹೋಗು” ಎಂಬ ಫಲಕಗಳನ್ನು ಹಿಡಿದಿದ್ದರು.

ಸಾವಿರಾರು ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ ಅಧ್ಯಕ್ಷರ ಅರಮನೆಯ ಕಾಂಪೌಂಡ್‌ಗೆ ನುಗ್ಗುವ ಮೊದಲು ಅಧ್ಯಕ್ಷರು ಶನಿವಾರ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದ್ದರು. ಅಭೂತಪೂರ್ವ ಆರ್ಥಿಕ ಬಿಕ್ಕಟ್ಟಿನ ಮಧ್ಯೆ  ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರ ರಾಜೀನಾಮೆಗೆ ದೇಶಾದ್ಯಂತ ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News