ನೆತನ್ಯಾಹು ನಿಲುವು ಅಪಾಯಕಾರಿ : ಅರಬ್ ಲೀಗ್ ಎಚ್ಚರಿಕೆ

Update: 2024-09-06 17:08 GMT

ಬೆಂಜಮಿನ್ ನೆತನ್ಯಾಹು | PC : PTI

ಕೈರೋ : ವೈಯಕ್ತಿಕ ಮತ್ತು ರಾಜಕೀಯ ಲಾಭಗಳಿಗಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕದನ ವಿರಾಮ ಒಪ್ಪಂದಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಅರಬ್ ಲೀಗ್ ಪ್ರಧಾನ ಕಾರ್ಯದರ್ಶಿ ಅಹ್ಮದ್ ಅಬೌಲ್ ಘಿಯೆಟ್ ಆರೋಪಿಸಿದ್ದಾರೆ.

ಫೆಲಸ್ತೀನೀಯರ ಹಕ್ಕುಗಳನ್ನು ರಕ್ಷಿಸಲು ಈಜಿಪ್ಟ್‌ ನ ಬದ್ಧತೆಯನ್ನು ಪುನರುಚ್ಚರಿಸಿದ ಅವರು `ಇಸ್ರೇಲ್ ನ ಇತ್ತೀಚಿನ ಹೇಳಿಕೆಗಳು, ವಿಶೇಷವಾಗಿ ನೆತನ್ಯಾಹು ಅವರ ಪ್ರತಿಪಾದನೆ ಈ ವಲಯದಲ್ಲಿ ಈಜಿಪ್ಟ್ ನ ಪ್ರಮುಖ ಪಾತ್ರವನ್ನು ದುರ್ಬಲಗೊಳಿಸುವ ಅಪಾಯವಿದೆ' ಎಂದಿದ್ದಾರೆ.

ಗಾಝಾಕ್ಕೆ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯನ್ನು ತಡೆಯಲು ಈಜಿಪ್ಟ್ ವಿಫಲವಾಗಿದೆ ಎಂದು ನೆತನ್ಯಾಹು ಆರೋಪಿಸಿದ್ದರು. ಈ ಆರೋಪವನ್ನು ತಳ್ಳಿಹಾಕಿರುವ ಅಹ್ಮದ್ ಅಬೌಲ್ `ಇದು ವೈಯಕ್ತಿಕ ಮತ್ತು ರಾಜಕೀಯ ಲಾಭಕ್ಕಾಗಿ ಗಾಝಾ ಬಿಕ್ಕಟ್ಟನ್ನು ವಿಸ್ತರಿಸುವ ಗುರಿಯನ್ನು ಹೊಂದಿರುವ ಹೇಳಿಕೆ' ಎಂದಿದ್ದಾರೆ.

ಫಿಲಾಡೆಲ್ಫಿ ಕಾರಿಡಾರ್ನಲ್ಲಿ ಇಸ್ರೇಲ್ ಪಡೆಗಳ ಉಪಸ್ಥಿತಿಗೆ ಈಜಿಪ್ಟ್‌ ನ ವಿರೋಧವನ್ನು ಅರಬ್ ರಾಷ್ಟ್ರಗಳು ಬೆಂಬಲಿಸಿವೆ. ಇದು ಕಾನೂನು ಮತ್ತು ರಾಜಕೀಯ ಮಹತ್ವವನ್ನು ಹೊಂದಿದೆ ಎಂದವರು ಹೇಳಿದ್ದಾರೆ.

ಗಾಝಾದಲ್ಲಿ ಕದನ ವಿರಾಮಕ್ಕೆ ಒಪ್ಪಿಕೊಳ್ಳಲು ಇಸ್ರೇಲ್ ನ ಮೇಲೆ ಅಂತರಾಷ್ಟ್ರೀಯ ಒತ್ತಡ ಹೆಚ್ಚಬೇಕು ಎಂದು ಅರಬ್ ಲೀಗ್ ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News