ಅಫ್ಘಾನ್: ಮಹಿಳೆಯರ ಪ್ರತಿಭಟನೆ

Update: 2022-10-18 17:32 GMT

ಕಾಬೂಲ್, ಅ.18: ಕಾಬೂಲ್(Kabul) ವಿವಿಯ ವಿದ್ಯಾರ್ಥಿಗಳ ವಸತಿ ನಿಲಯದಿಂದ ವಿದ್ಯಾರ್ಥಿಗಳನ್ನು ಹೊರಹಾಕಿದ ಕ್ರಮವನ್ನು ವಿರೋಧಿಸಿ ಕಾಬೂಲ್‌ನಲ್ಲಿ ಅಫ್ಘಾನ್‌(Afghan)ನ ಮಹಿಳೆಯರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.

ವಸತಿ ನಿಲಯ(ಹಾಸ್ಟೆಲ್)ನ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣ ನೀಡಿ ವಿದ್ಯಾರ್ಥಿಗಳನ್ನು ಹೊರ ಹಾಕಿದ್ದು ಇದರಲ್ಲಿ ಹೆಚ್ಚಿನವರು ಹುಡುಗಿಯರು. ಹುಡುಗಿಯರ ಪರವಾಗಿ ನಾವು ಧ್ವನಿ ಎತ್ತುತ್ತಿದ್ದೇವೆ. ನಮ್ಮನ್ನು ಹೊರಹಾಕಬೇಡಿ. ಶಿಕ್ಷಣ ನಮಗೆ ಅಗತ್ಯವಾಗಿದೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಅಫ್ಘಾನ್ ತಾಲಿಬಾನ್‌ನ ನಿಯಂತ್ರಣಕ್ಕೆ ಬಂದಂದಿ ನಿಂದ ಮುಚ್ಚಲಾಗಿರುವ ಬಾಲಕಿಯರ  ಮಾಧ್ಯಮಿಕ ಶಾಲೆಗಳನ್ನು ಪುನರಾರಂಭಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಹಲವು ನಗರಗಳಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ.

ವಿಶ್ವವಿದ್ಯಾನಿಲಯದ ವಸತಿ  ನಿಲಯದ ನಿಯಮ, ನಿಬಂಧನೆಗಳನ್ನು ಉಲ್ಲಂಘಿಸಿದ ಕಾರಣಕ್ಕೆ ವಿದ್ಯಾರ್ಥಿಗಳನ್ನು ಹೊರಹಾಕಲಾಗಿದೆ ಎಂದು ಅಫ್ಘಾನ್‌ನ ಉನ್ನತ ಶಿಕ್ಷಣ ಸಚಿವಾಲಯ ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News