ಭಾರತಕ್ಕೆ ಜಾಗತಿಕ ಪಾತ್ರ

ಇಂದಿನಿಂದ ಜಿ-20 ದೇಶಗಳ ಹಣಕಾಸು ಅಧಿಕಾರಿಗಳ ಸಭೆ; ಭಾರತದ ಆದ್ಯತೆಗಳ ಅನಾವರಣ

Update: 2022-12-13 04:02 GMT

ರಾಜಕೀಯ ಸವಾಲುಗಳಿಂದ ಕೂಡಿದ ಸವಾಲಿನ ಜಾಗತಿಕ ಪರಿಸರದ ನಡುವೆ ಭಾರತವು ಜಿ-20 ವಹಿಸಿಕೊಂಡಿದೆ. ಜಾಗತಿಕ ಬೆಳವಣಿಗೆ ಮತ್ತು ವ್ಯಾಪಾರ, ಅಧಿಕ ಹಣದುಬ್ಬರ, ಆಕ್ರಮಣಕಾರಿ, ವಿತ್ತೀಯ ನೀತಿ ರಾಜಕೀಯ "ಉದ್ವಿಗ್ನತೆ, ಸಾಲದ ಬಿಕ್ಕಟ್ಟು ಹವಾಮಾನ ಬದಲಾವಣೆ ಮತ್ತು ಸಾಂಕ್ರಮಿಕ ರೋಗಗಳೊಂದಿಗೆ ಜಿ -20' 'ಸರಣಿ ಸಂಕಟಗಳʼ ಸನ್ನಿವೇಶವನ್ನು ಎದುರಿಸುತ್ತಿದೆ.

ಜಾಗತಿಕ ನೀತಿ ಸಹಕಾರವನ್ನು ಬೆಳೆಸುವಲ್ಲಿ ಜಿ-20 ಪಾತ್ರ ನಿರ್ಣಾಯಕವಾಗಿದೆ. ಭಾರತವು ಕೊಳ್ಳುವ ಶಕ್ತಿಯ ಸಮಾನತ (ಪಿಪಿಪಿ) ನಿಯಮಗಳಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಮತ್ತು ಮಾರುಕಟ್ಟೆ ವಿನಿಮಯ ದರಗಳ ವಿಷಯದಲ್ಲಿ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. 2023 ರಲ್ಲಿ ಭಾರತದ ಜೆಡಿಪಿ 6.1ಕ್ಕೆ ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ. ಇದು G-20 ರಾಷ್ಟ್ರಗಳಲ್ಲಿಯೇ ಅತ್ಯಧಿಕವಾಗಿದೆ.

ನಮ್ಮ ಅನುಭವಗಳು ಆರ್ಥಿಕ ಸೇರ್ಪಡೆಯನ್ನು ವಿಸ್ತರಿಸುವಲ್ಲಿ ಉತ್ಪಾದಕತೆ, ಮತ್ತು ಆರ್ಥಿಕ ಏಕೀಕರಣಕ್ಕೆ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸುವಲ್ಲಿ ಭಾರತದ ಪಾತ್ರ ಅನನ್ಯ ವಾಗಿದೆ. ಭಾರತ ಮುಂದಾಳತ್ವ ವಹಿಸಿರುವುದರಿಂದ ಈ ವಲಯದಲ್ಲಿ ಗಣನೀಯ ಕೊಡುಗೆ ನೀಡಬಹುದು ಎಂಬ ಅಚಲ ನಂಬಿಕೆ ನಮ್ಮದು.

ಜಿ-20 ಅಧ್ಯಕ್ಷತೆಯನ್ನು ಸ್ವೀಕರಿಸಿ, ಪ್ರಧಾನಿ ನರೇಂದ್ರ ಮೋದಿ ಅವರು, ''ಭಾರತದ ಜಿ-20 ಆದ್ಯತೆಗಳನ್ನು ನಮ್ಮ ಜಿ -20 ಪಾಲುದಾರರೊಂದಿಗೆ ಸಮಾಲೋಚಿಸಿ ರೂಪಿಸಲಾಗುವುದು. ಜಾಗತಿಕ ಹಣಕಾಸು ಸುರಕ್ಷತಾ ಜಾಲಗಳನ್ನು ಬಲಪಡಿಸುವುದು, ಜಾಗತಿಕ ಸಾಲದ ದೋಷಗಳನ್ನು ನಿರ್ವಹಿಸುವುದು, ಆಹಾರ ಮತ್ತು ಶಕ್ತಿಯ ಅಭದ್ರತೆಯ ಸ್ಥೂಲ ಆರ್ಥಿಕ ಪರಿಣಾಮಗಳನ್ನು ನಿರ್ಣಯಿಸುವುದು ಮತ್ತು ನಾಳೆಯ ಸಮರ್ಥನೀಯ ಮತ್ತು ಚೇತರಿಸಿಕೊಳ್ಳುವ ನಗರಗಳಿಗೆ ಹಣಕಾಸು ಒದಗಿಸುವುದು ಸೇರಿವೆ.

ಸಮರ್ಥ ವೃದ್ಧಿ ಮತ್ತು ತೆರಿಗೆ ಪಾರದರ್ಶಕತೆಯನ್ನು ಹೆಚ್ಚಿಸುವುದು ಸೇರಿದಂತೆ ಜಿ-20 ಮಾಡಿದ ಗಮನಾರ್ಹ ಪ್ರಗತಿಯನ್ನು ನಾವು ನಿರ್ಮಿಸುತ್ತೇವೆ. ಸಾಂಕ್ರಾಂಇಕ ರೋಗಗಳಿಗೆ ಸಂಬಂಧಿಸಿದ ಅಪಾಯಗಳು ಮತ್ತು ದುರ್ಬಲತೆಗಳನ್ನು ಗುರುತಿಸಲು ಮತ್ತು ಪರಿಹರಿಸಲು ಮತ್ತು ಹೊಸ ಸಾಂಕ್ರಾಮಿಕ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಸಜ್ಜುಗೊಳಿಸಲು ಸನ್ನದ್ಧತೆಯನ್ನು ಸಧಾರಿಸಲು ನಾವು ಜಿ-20 ಚಾಲಿತ ಹಣಕಾಸು ಮತ್ತು ಆರೋಗ್ಯ ಸಮನ್ವಯವನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸುತ್ತೇವೆ” ಎಂದು ಘೋಷಿಸುವುದರ ಮೂಲಕ ಭಾರತದ ಪಾತ್ರವನ್ನು ಸ್ಪಷ್ಟಪಡಿಸಿದ್ದಾರೆ.

''ಆರ್ಥಿಕತೆಯು ಹೆಚ್ಚು ಡಿಜಿಟೈಸ್ ಆಗುತ್ತಿದ್ದಂತೆ, ಸೈಬರ್ ಅಪಾಯವು ಹಣಕಾಸು ವ್ಯವಸ್ಥೆಗೆ ಅಪಾಯವನ್ನುಂಟು‌ ಮಾಡುತ್ತದೆ. ಭಾರತದ ಅಧ್ಯಕ್ಷತೆಯ ಅವಧಿಯಲ್ಲಿ, ಸೈಬರ್ ಅಪಾಯದಿಂದ ಪಾರಾಗುವುದಕ್ಕೆ ಅಮೂಲಾಗ್ರ ಆರ್ಥಿಕ ಪರಿಹಾರಗಳನ್ನು ಹುಡುಕುವುದು, ಸಬಲತೆಯನ್ನು ಹೆಚ್ಚಿಸುವಲ್ಲಿ ಸಹಕಾರವನ್ನು ಹೆಚ್ಚಿಸಲು ಜಾಗತಿಕ ಬಯಸುತ್ತೇವೆ,'' ಎಂದು ಘೋಷಿಸುವುದರ ಮೂಲಕ ಪ್ರಧಾನಿಯವರು ಸಹಕಾರ ತತ್ವದ ಮಹತ್ವವನ್ನು ಸಾರಿದ್ದಾರೆ.

ಪ್ರತಿಯೊಂದು ಬಿಕ್ಕಟ್ಟು ಒಂದು ಅವಕಾಶವನ್ನು ನೀಡುತ್ತದೆ. ಆದ್ದರಿಂದ ಪ್ರಸ್ತುತ ಸರಣಿ ಸಂಕಟಗಳನ್ನು ಎದುರಿಸಲು ಜಾಗತಿಕ ಆರ್ಥಿಕತೆಯು ಬಿಕ್ಕಟ್ಟನ್ನು ಸರಿಪಡಿಸಲು ಮತ್ತು ಜಾಗತಿಕ ಆರ್ಥಿಕತೆಯನ್ನು ಜಿ-20 ಪ್ರಣಾಳಿಕೆಯನ್ನು ಆಚರಣೆಯ ಪಥದಲ್ಲಿ ಇರಿಸಲು ಜಾಗತಿಕ ನೀತಿ ಸಹಕಾರದ ಪುನಶ್ಚೇತನಕ್ಕೆ ಕಾರಣವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಮಾನವ ಪ್ರಗತಿಯು ʼವಸಧೈವ ಕುಟುಂಬಕಂʼ- ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯವನ್ನು ಅವಲಂಬಿಸಿದೆ.

(ಲೇಖಕರಾದ ಸೇಠ್‌ ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾಗಿದ್ದಾರೆ. ಪಾತ್ರ ಅವರು ಆರ್‌ಬಿಐ ಸಹಾಯಕ ನಿರ್ದೇಶಕರಾಗಿದ್ದಾರೆ)

Similar News