‘ಬ್ಲೂ ಮಾರ್ಬಲ್’ಗೆ 50
Update: 2022-12-13 05:59 GMT
‘ಬ್ಲೂ ಮಾರ್ಬಲ್’. ಇದೊಂದು ಅದ್ಭುತ ಛಾಯಾಚಿತ್ರ. ನಮ್ಮ ಭೂಮಿಯನ್ನು ಕಣ್ಣೆದುರು ತಂದುಕೊಳ್ಳುವ ಬಗೆಯನ್ನೇ ಬದಲಿಸಿದ ಚಿತ್ರ. ಇದು ಇಡೀ ಸುತ್ತಿನ ಭೂಮಿಯ ಮೊದಲ ಛಾಯಾಚಿತ್ರವಾಗಿದೆ ಮತ್ತು ಅತಿ ಹೆಚ್ಚು ಬಾರಿ ಮರು ಉತ್ಪಾದಿತ ಚಿತ್ರ ಎಂದು ನಂಬಲಾಗಿದೆ. ಈ ಅಪರೂಪದ ಚಿತ್ರಕ್ಕೆ 50 ವರ್ಷ ತುಂಬಿತು. ಭೂಮಿಯ ಈ ಛಾಯಾಚಿತ್ರವು ಡಿಸೆಂಬರ್ 7, 1972ರಂದು ಅಂತಿಮ ಅಪೊಲೊ ಮಿಷನ್, ಅಪೊಲೊ 17ರ ಸಿಬ್ಬಂದಿ ಚಂದ್ರನ ಮೇಲಿನ ಲ್ಯಾಂಡಿಂಗ್ ಕಾರ್ಯಾಚರಣೆಯಲ್ಲಿ ಚಂದ್ರನ ಕಡೆಗೆ ಪ್ರಯಾಣಿಸುತ್ತಿದ್ದಾಗ ತೆಗೆದದ್ದು. ಛಾಯಾಚಿತ್ರವನ್ನು ಭೂಮಿಯಿಂದ 18,000 ಮೈಲಿ (29,000 ಕಿಲೋಮೀಟರ್) ಅಂತರದಲ್ಲಿದ್ದು ಸೆರೆಹಿಡಿಯಲಾಗಿದೆ.
ಇದರ ಐವತ್ತನೇ ವರ್ಷಾಚರಣೆ ಹಿನ್ನೆಲೆಯಲ್ಲಿ Instagramನಲ್ಲಿ ಛಾಯಾಚಿತ್ರವನ್ನು ಹಂಚಿಕೊಂಡ NASA ಹೀಗೆ ಬರೆದಿದೆ: ‘‘ಇಂದು ಬ್ಲೂ ಮಾರ್ಬಲ್ ಎಂದು ಕರೆಯಲ್ಪಡುವ ಈ ಚಿತ್ರವು ನಮ್ಮ ಭೂಮಿಯ ಅಪ್ರತಿಮ ಚಿತ್ರಗಳಲ್ಲಿ ಒಂದಾಗಿದೆ.’’