ಟರ್ಕಿ: ಭೂಕಂಪದಿಂದಾಗಿ 100 ಶತಕೋಟಿ ಡಾಲರ್ ಗೂ ಅಧಿಕ ನಷ್ಟ

Update: 2023-03-07 16:29 GMT

ಅಂಕಾರ, ಮಾ.7: ಟರ್ಕಿಯಲ್ಲಿ ಕಳೆದ ತಿಂಗಳು ಸಂಭವಿಸಿದ್ದ ವಿನಾಶಕಾರಿ ಭೂಕಂಪದಲ್ಲಿ ಆಗಿರುವ ಹಾನಿ 100 ಶತಕೋಟಿಗೂ ಮೀರಿದೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.

ಮಂಗಳವಾರ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದ ಪ್ರತಿನಿಧಿ ಲೂಯಿಸಾ ವಿಂಟನ್ `ಇದುವರೆಗಿನ ನಾಷ-ನಷ್ಟದ ಲೆಕ್ಕಾಚಾರದ  ಮತ್ತು ಸರಕಾರಕ್ಕೆ ಸಲ್ಲಿಸಿರುವ ದಾಖಲೆ ಪ್ರಕಾರ ಭೂಕಂಪದಿಂದ 100 ಶತಕೋಟಿ ಡಾಲರ್‍ಗೂ ಹೆಚ್ಚು ಹಾನಿಯಾಗಿದೆ. ‌

ಈ ಪ್ರಾಥಮಿಕ ಮಾಹಿತಿಯನ್ನು ಆಧರಿಸಿ ಮಾರ್ಚ್ 16ರಂದು ಬೆಲ್ಜಿಯಂನ ಬ್ರಸೆಲ್ಸ್ ನಲ್ಲಿ ನಡೆಯುವ ದೇಣಿಗೆದಾರರ ಸಮಾವೇಶದಲ್ಲಿ ಟರ್ಕಿ-ಸಿರಿಯಾ ಭೂಕಂಪ ಸಂತ್ರಸ್ತರಿಗೆ  ನೆರವು ನಿಧಿ ಕ್ರೋಢೀಕರಿಸಲಾಗುವುದು' ಎಂದವರು  ಹೇಳಿದ್ದಾರೆ.

Similar News