ಕೃಷಿಯಲ್ಲಿ ಇಷ್ಟೊಂದು ಲಾಭವಿದೆಯೇ!
ಮಾನ್ಯರೇ,
ಅಧಿಕಾರಿಗಳು ತನ್ನ ಮನೆಯಲ್ಲಿ ವಶಪಡಿಸಿಕೊಂಡ ಎಂಟು ಕೋಟಿ ರೂ. ಅಡಿಕೆ ಮಾರಿ ಬಂದ ದುಡ್ಡು ಎಂದು ಶಾಸಕರು ಹೇಳಿದ್ದಾರೆ. ಪುಣ್ಯಕ್ಕೆ ಅದು ಮುಂಬರುವ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ತಂದಿಟ್ಟದ್ದು ಎಂದು ಅತ್ಯಂತ ಪ್ರಾಮಾಣಿಕರಾಗಿ, ಮುಗ್ಧತೆಯಿಂದ ಹೇಳಿಲ್ಲವಲ್ಲ! ಅಷ್ಟೊಂದು ದೊಡ್ಡ ಮೊತ್ತ ಅವರಿಗೆ ವ್ಯವಸಾಯದಿಂದ ದೊರಕಬೇಕಾದರೆ ಅವರ ಹಾಗೂ ಅವರ ಕುಟುಂಬದವರ ಹೆಸರಲ್ಲಿ ಅದೆಷ್ಟು ಸಹಸ್ರ ಎಕರೆ ಕೃಷಿ ಭೂಮಿ ಇರಬಹುದು?
ಅಂದ ಹಾಗೆ ಕೋಟಿಗಟ್ಟಲೆ ರೂ.ಗಳನ್ನು ಅಡಿಕೆ ವ್ಯಾಪಾರಿಗಳು ನಗದಲ್ಲೇ ವ್ಯವಹರಿಸುತ್ತಾರೆಂದಾದರೆ, ಅವುಗಳ ಎಲ್ಲ ಲೆಕ್ಕವೂ ಮಾರಾಟ ತೆರಿಗೆ, ಆದಾಯ ತೆರಿಗೆಗಳ ವ್ಯಾಪ್ತಿಗೆ ಬಂದಿರುವುದನ್ನು ಖಾತ್ರಿ ಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ಅಂತಹ ವ್ಯಾಪಾರಿಗಳ ಲೆಕ್ಕ ಶೋಧನೆಯನ್ನು ಈಗಾಗಲೇ ಪ್ರಾರಂಭಿಸಿರಬಹುದೆಂದೇ ತಿಳಿಯೋಣವೇ?
ವಿಚಿತ್ರವೆಂದರೆ, ಮಾನ್ಯ ಪ್ರಧಾನ ಮಂತ್ರಿಗಳು ಡಿಜಿಟಲ್ ವಹಿವಾಟು ಎಂದು ಅಷ್ಟೆಲ್ಲ ‘ಮನ್ ಕೀ ಬಾತ್’ ಹೇಳುತ್ತಿದ್ದರೂ ಶಾಸಕ ಕಮ್ ರೈತ ಇನ್ನೂ ಡಿಜಿಟಲ್ ಯುಗಕ್ಕೆ ಬಂದಿಲ್ಲವಲ್ಲ!