ಶಾಂತಿ ಮಾತುಕತೆ ಬೆಂಬಲಿಸಲು ಯುರೋಪ್‍ಗೆ ಚೀನಾ ಆಗ್ರಹ

Update: 2023-03-24 17:15 GMT

ಬೀಜಿಂಗ್, ಮಾ.24: ಉಕ್ರೇನ್‍ನಲ್ಲಿ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಶಾಂತಿ ಮಾತುಕತೆಯನ್ನು ಬೆಂಬಲಿಸಲು  ಯುರೋಪ್ ಮುಂದಾಗಬೇಕು ಎಂದು ಚೀನಾ ಆಗ್ರಹಿಸಿದೆ.

ಕದನ ವಿರಾಮ, ಯುದ್ಧವನ್ನು ನಿಲ್ಲಿಸುವುದು, ಶಾಂತಿ ಮಾತುಕತೆಯ ಪುನರಾರಂಭ, ಬಿಕ್ಕಟ್ಟಿಗೆ ರಾಜಕೀಯ ಪರಿಹಾರ ರೂಪಿಸುವ ವಿಷಯದಲ್ಲಿ ಚೀನಾ ಮತ್ತು ಯುರೋಪ್ ನಡುವೆ ಕಾರ್ಯತಂತ್ರದ ಸಹಮತ ಮೂಡಬೇಕಿದೆ. ಫ್ರಾನ್ಸ್ ಹಾಗೂ ಇತರ ಯುರೋಪಿಯನ್ ದೇಶಗಳೂ ತಮ್ಮ ಸೂಕ್ತ ಪಾತ್ರವನ್ನು ನಿರ್ವಹಿಸುವುದಾಗಿ ಆಶಿಸುತ್ತೇವೆ' ಎಂದು ಚೀನಾದ ಉನ್ನತ ರಾಜತಾಂತ್ರಿಕ ಅಧಿಕಾರಿ ವಾಂಗ್ ಯಿಯನ್ನು ಉಲ್ಲೇಖಿಸಿದ ಚೀನಾದ ವಿದೇಶಾಂಗ ಇಲಾಖೆಯ ವರದಿ ಹೇಳಿದೆ.

ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ರಶ್ಯಕ್ಕೆ ಭೇಟಿ ನೀಡಿ ಅಧ್ಯಕ್ಷ ಪುಟಿನ್ ಜತೆ ಮಾತುಕತೆ ನಡೆಸಿದ ಬಳಿಕ ಈ ಹೇಳಿಕೆ ಹೊರಬಿದ್ದಿದೆ.

ಆದರೆ ಚೀನಾದ ಈ ಪ್ರಸ್ತಾವನೆ ರಶ್ಯದ ಕಡೆಗಿನ ಪಕ್ಷಪಾತದ ಉಪಕ್ರಮವಾಗಿದೆ ಎಂದು ಅಮೆರಿಕ ಮತ್ತದರ ಮಿತ್ರರಾಷ್ಟ್ರಗಳು ಟೀಕಿಸಿವೆ.

Similar News