ಕಾಪು: ಆಡಳಿತ ಕಚೇರಿಯಲ್ಲಿಯೇ ನಾಮಪತ್ರ ಸಲ್ಲಿಕೆಗೆ ಅವಕಾಶ

Update: 2023-03-30 15:45 GMT

ಕಾಪು : ಮುಂಬರುವ ವಿಧಾನಸಭಾ ಚುನಾವಣೆಗೆ ಕಾಪು ತಾಲ್ಲೂಕು ರಚನೆಗೊಂಡ ಬಳಿಕ ಎರಡನೇ ಚುನಾವಣೆಯಾಗಿದ್ದು, ಈ ಬಾರಿ ಕಾಪು ಆಡಳಿತ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಅವಕಾಶ ಕಲ್ಪಿಸಲಾಗಿದೆ.  

ಕಾಪು ಪುರಸಭಾ ಕಚೇರಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಕಾಪು ವಿಧಾನಸಭಾ ಚುನಾವಣಾಧಿಕಾರಿ ಬಿನೋಯ್ ನಂಬಿಯಾರ್ ಮಾತನಾಡಿದರು. 

ಕಾಪು ವಿಧಾನಸಭಾ ಕ್ಷೇತ್ರದಲ್ಲಿ 186681 ಮತದಾರರಿದ್ದು, 89444 ಪುರುಷ ಹಾಗೂ 97233 ಮಹಿಳಾ ಮತದಾರರಿದ್ದಾರೆ. 3560 ಹೊಸ ಮತದಾರರಿದ್ದು, 1738 ಪುರುಷ ಹಾಗೂ 1822 ಮಹಿಳಾ ಮತದಾರರಿದ್ದಾರೆ. 80 ವರ್ಷಕ್ಕಿಂತ ಹೆಚ್ಚಿನವರು ಒಟ್ಟು 5778 ಮತದಾರರಿದ್ದು, 2202 ಪುರುಷ ಹಾಗೂ 3576 ಮಹಿಳಾ ಮತದಾರರಿದ್ದಾರೆ. ವಿಕಲಚೇತನ ಮತದಾರರು ಒಟ್ಟು 2550 ಪುರುಷ 1120 ಮಹಿಳೆ 1030 ಮತದಾರರಿದ್ದಾರೆ.

ಮಹಿಳಾ ಮತದಾರರೇ ಹೆಚ್ಚು: ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಅಧಿಕ ಸಂಖ್ಯೆಯಲ್ಲಿ ದ್ದಾರೆ. ಒಟ್ಟು ಮತದಾರರ ಪೈಕಿ 97233 ಮಹಿಳಾ ಮತದಾರರಿದ್ದು, 1789 ಹಚ್ಚು ಮಹಿಳಾ ಮತದಾರರು, ಹೊಸ ಮತದಾರರರ ಪೈಕಿ ಮಹಿಳಾ ಮತದಾರರು 173, 80ಕ್ಕಿಂತ ಮೇಲಿನ ಮಹಿಳಾ ಮತದಾರರ ಪೈಕಿ 1374 ಹೆಚ್ಚು ಮತದಾರು ಪುರುಷ ಮತದಾರರಿಗಿಂತ ಹೆಚ್ಚು ಇದ್ದಾರೆ. 

208 ಮತಗಟ್ಟೆಗಳಿದ್ದು, ಸೂಕ್ಷ್ಮ 24, ಸಾಮಾನ್ಯ 184 ಇವೆ. ಮೂರು ತಂಡಗಳು 24 ಗಂಟೆಗಳು ಕಾರ್ಯ ನಿರ್ವಹಿಸಲಿದ್ದು, ಒಂಬತ್ತು ಅಧಿಕಾರಿಳು ಹಾಗೂ ಒಂಬತ್ತು ಸಹಾಯಕರು ಇರಲಿದ್ದಾರೆ. ಸೆಕ್ಟರ್ ಅಧಿಕಾರಿಗಳು ಸಹಿತ ಒಟ್ಟು 1145 ಸಿಬ್ಬಂದಿಗಳು ಚುನಾವಣಾ ಕಾರ್ಯದಲ್ಲಿ ನಿರತರಾಗಲಿದ್ದಾರೆ.  

ನಾಲ್ಕು ಚೆಕ್‍ಪೋಸ್ಟ್: ಚುನಾವಣಾ ನೀತಿ ಸಂಹಿತೆ ಈಗಾಗಲೇ ಜರಿಯಾಗದ್ದಿ, ನಾಲ್ಕು ಕಡೆಗಳಲ್ಲಿ ಕಾಪು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಚೆಕ್‍ಪೋಸ್ಟ್ ಗಳನ್ನು ತೆರೆಯಲಾಗಿದೆ. ಚೆಕ್‍ಪೋಸ್ಟ್ ಗಳಲ್ಲಿ ವಾಹನಗಳ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಹೆಜಮಾಡಿ, ಕಟಪಾಡಿ, ಮೂಡುಬೆಳ್ಳೆ ಹಾಗೂ ಅಂಜಾರಿನಲ್ಲಿ ಚೆಕ್‍ಪೋಸ್ಟ್ ತೆರೆಯಲಾಗಿದೆ. ಈಗಾಗಲೇ ಚೆಕ್‍ಪೋಸ್ಟ್ ಗಳಲ್ಲಿ ದಾಖಲೆ ಇಲ್ಲದೆ ರೂ. 45 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಹಿಂದಿನಂತೆ ಸ್ಥಳೀಯಾಡಳಿತ ಹಾಗೂ ಪೊಲೀಸ್ ಇಲಾಖೆಯ ಅನುಮತಿ ಪಡೆದು ಕಾರ್ಯಕ್ರಮ ಆಯೋಜಿಸಲು ಅವಕಾಸ ಇವೆ. ಬ್ಯಾನರ್ ಅಳವಡಿಕೆ ವಿಚಾರದಲ್ಲೂ ಕಾರ್ಯಕ್ರಮ ನಡೆಯುವ ಸ್ಥಳದ 50 ಮೀಟರ್ ವ್ಯಾಪ್ತಿಯೊಳಗೆ ಎರಡು ಬ್ಯಾನರ್‍ಗೆ ಅನುಮತಿ ಪಡೆದು ಕಾರ್ಯಕ್ರಮ ಸಹಿತ ಅವಕಾಶವಿದೆ. ಚುನಾವನೆಗೆ ಸಂಬಂಧಿಸಿ ಯಾವುದೇ ದೂರುಗಳು, ಸಂಶಯಗಳು ಇದ್ದಲ್ಲಿ ಹೆಲ್ಪ್ ಡೆಸ್ಕ್ ನಂಬರ್ 0820-2541555 ಸಂಪರ್ಕಿಸಬಹುದು ಎಂದರು. ತಹಸೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಇದ್ದರು.

Similar News