ಅಮೆರಿಕ-ಕೆನಡಾ ಗಡಿಭಾಗದ ಸನಿಹ 6 ಮೃತದೇಹ ಪತ್ತೆ

Update: 2023-03-31 17:38 GMT

ಟೊರಂಟೊ, ಮಾ.31: ಅಮೆರಿಕ ಮತ್ತು ಕೆನಡಾದ ನಡುವಿನ ಗಡಿಪ್ರದೇಶದ ಬಳಿ ಆರು ಅಪರಿಚಿತ ವ್ಯಕ್ತಿಗಳ ಮೃತದೇಹ ಗುರುವಾರ ಪತ್ತೆಯಾಗಿದೆ ಎಂದು ಕೆನಡಾದ ಮಾಧ್ಯಮಗಳು ವರದಿ ಮಾಡಿವೆ.

ಗಡಿಭಾಗದ ಸನಿಹದಲ್ಲಿರುವ ಸೈಂಟ್ ಲಾರೆನ್ಸ್ ನದಿಯ ದಡದ ಜವುಗು ಪ್ರದೇಶದಲ್ಲಿ ಗಿಡಗಂಟಿಗಳ ನಡುವೆ  ಮೊದಲ ಮೃತದೇಹ ಪತ್ತೆಯಾಗಿದೆ. ಬಳಿಕ ಕರಾವಳಿ ರಕ್ಷಣಾ ಪಡೆ ಹಾಗೂ ಪೊಲೀಸರು  ಈ ಪ್ರದೇಶದಲ್ಲಿ ಇನ್ನಷ್ಟು ಪರಿಶೀಲನೆ ನಡೆಸಿದಾಗ ಮತ್ತೆ 5 ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ವರ್ಷದ ಎಪ್ರಿಲ್ನಲ್ಲಿ ಇದೇ ಪ್ರದೇಶದಲ್ಲಿರುವ ಸೈಂಟ್ ರೆಗಿಸ್ ನದಿಯ ಹೆಪ್ಪುಗಟ್ಟಿದ ನೀರಿನಲ್ಲಿ ಸಿಲುಕಿದ್ದ 6 ಭಾರತೀಯರನ್ನು ರಕ್ಷಿಸಲಾಗಿತ್ತು.

Similar News