​ಹೊಸ ಬಸ್ ಸಂಚಾರ ಹೀಗಿರಲಿ

Update: 2023-04-03 18:40 GMT

ಮಾನ್ಯರೇ,

ಕರ್ನಾಟಕದ ದೊಡ್ಡ ನಗರಗಳಲ್ಲಿ ರಿಂಗ್ ರೋಡ್ ಬಸ್ ಸಂಚಾರ ಇದ್ದು ಇದರಿಂದಾಗಿ ಪ್ರಯಾಣಿಕರಿಗೆ ಹಣ, ಶ್ರಮ, ಸಮಯದ ಉಳಿತಾಯ ಆಗುತ್ತದೆ. ಮಂಗಳೂರಿನ ವಿವಿಧ ಭಾಗಗಳಿಗೆ ತೆರಳುವ ವಿದ್ಯಾರ್ಥಿ ಹಾಗೂ ಇತರ ಪ್ರಯಾಣಿಕ ರಿಗೆ ರಿಂಗ್‌ರೋಡ್ ಬಸ್ ಸಂಚಾರದ ಅಗತ್ಯ ತೀರಾ ಹೆಚ್ಚಾಗಿ ಕಂಡುಬರುತ್ತದೆ.
ಬಸ್ಸು ರೂಟ್ ಸಂಖ್ಯೆ 65: ಪಡೀಲು ಹೊಸ ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭಿಸಿ, ಮಂಗಳೂರು ಜಂಕ್ಷನ್ ರೈಲು ನಿಲ್ದಾಣ, ನಾಗೊರಿ, ಪಂಪ್‌ವೆಲ್ ಹಳೆ ರಸ್ತೆ ಮೂಲಕ ಕಂಕನಾಡಿ, ಫಳ್ನೀರ್, ಹಂಪನಕಟ್ಟ್ಟೆ, ಸ್ಟೇಟ್ ಬ್ಯಾಂಕ್ ಅಲ್ಲಿಂದ ವಾಪಸ್ ಜ್ಯೋತಿ, ಬಂಟ್ಸ್ ಹಾಸ್ಟೆಲ್, ಮಲ್ಲಿಕಟ್ಟ್ಟೆ, ನಂತೂರು, ಬಿಕರ್ನಕಟ್ಟೆ, ಮರೋಳಿ, ಪಡೀಲ್ ಜಂಕ್ಷನ್ ದಾಟಿ ಪಡೀಲ್‌ನ ಹೊಸ ಜಿಲ್ಲಾಧಿಕಾರಿ ಕಚೇರಿಗೆ ಬರುವುದು.
ಬಸ್ಸು ರೂಟು ಸಂಖ್ಯೆ 66: ಪಡೀಲ್ ಹೊಸ ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭಿಸಿ, ಮೇಲಿನ ಬಸ್ ರೂಟಿನ ವಿರುದ್ಧ ದಿಕ್ಕಿಗೆ ಸಂಚರಿಸಿ ಪಡೀಲ್ ಜಂಕ್ಷನ್, ಮರೋಳಿ, ನಂತೂರು, ಮಲ್ಲಿಕಟ್ಟ್ಟೆ, ಬಂಟ್ಸ್ ಹಾಸ್ಟೆಲ್, ಮುಖಾಂತರವಾಗಿ ಹಂಪನ ಕಟ್ಟೆ, ಸ್ಟೇಟ್ ಬ್ಯಾಂಕ್, ಪಂಪುವೆಲ್, ನಾಗೊರಿ, ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ, ಹೊಸ ಜಿಲ್ಲಾಧಿಕಾರಿ ಕಚೇರಿಗೆ ಬಂದು ಸೇರುವುದು.
ಈ ಮೇಲಿನ ಹೊಸ ರೂಟುಗಳನ್ನು ಆರಂಭಿಸಿದರೆ, ಎರಡೆರಡು ಬಸ್ಸುಗಳನ್ನು ಹಿಡಿದು ಅಥವಾ ನೂರಾರು ರೂಪಾಯಿ ನೀಡಿ ಅಟೋದಲ್ಲಿ ದುಬಾರಿಯಾಗಿ ಪ್ರಯಾಣಿಸಿ, ಹಣ, ಶ್ರಮ, ಸಮಯ ವ್ಯರ್ಥವಾಗುವುದನ್ನು ತಪ್ಪಿಸಬಹುದಾಗಿದೆ. ಪ್ರಯಾಣಿಸಲು ಎರಡು ಬಸ್ ಹಿಡಿಯುವ ಬದಲು ಒಂದೇ ಬಸ್ಸು ಸಾಕು.

Similar News