ಬಸ್ ತಂಗುದಾಣದಲ್ಲಿ ನಿಂತಿದ್ದವರ ಮೇಲೆ ಹರಿದ ಎಸ್‍ಯುವಿ; ಏಳು ಮಂದಿ ಮೃತ್ಯು

Update: 2023-05-08 02:51 GMT

ಬ್ರೌನ್ಸ್‍ವಿಲ್ಲೆ: ಬಸ್ ತಂಗುದಾಣದಲ್ಲಿ ನಿಂತಿದ್ದವರ ಮೇಲೆ ಎಸ್‍ಯುವಿ ಹರಿದು ಏಳು ಮಂದಿ ಮೃತಪಟ್ಟು, ಇತರ ಆರು ಮಂದಿ ಗಾಯಗೊಂಡಿರುವ ಘಟನೆ ಅಮೆರಿಕದ ಟೆಕ್ಸಸ್‍ನಲ್ಲಿ ನಡೆದಿದೆ.

ದಕ್ಷಿಣ ಅಮೆರಿಕನ್ ರಾಜ್ಯದಲ್ಲಿ ವಲಸೆಯವರಿಗೆ ಆಶ್ರಯ ಕಲ್ಪಿಸಿದ ತಾಣದ ಹೊರಗೆ ಈ ಘಟನೆ ಸಂಭವಿಸಿದೆ. "ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಹಲವು ಮಂದಿಯ ಮೇಲೆ ಎಸ್‍ಯುವಿ ಹರಿದಿದೆ" ಎಂದು ಸ್ಥಳೀಯ ಪೊಲೀಸ್ ವಕ್ತಾರ ಮಾರ್ಟಿನ್ ಸ್ಯಾಂಡೊವಲ್ ಹೇಳಿದ್ದಾರೆ.

ತೀವ್ರವಾಗಿ ಗಾಯಗೊಂಡಿರುವ ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆಗಮಿಸುವರೆಗೆ ವಾಹನ ಚಾಲಕನನ್ನು ಸ್ಥಳೀಯರು ಹಿಡಿದಿಟ್ಟುಕೊಂಡಿದ್ದು, ಚಾಲಕರ ವಿರುದ್ಧ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಆರೋಪ ಹೊರಿಸಲಾಗಿದೆ.

Similar News