ಕ್ಯಾಲಿಫೋರ್ನಿಯಾ: ಜಾತಿ ತಾರತಮ್ಯ ವಿರೋಧಿ ಮಸೂದೆ ಅಂಗೀಕಾರ

Update: 2023-05-12 17:16 GMT

ವಾಷಿಂಗ್ಟನ್, ಮೇ 12: ಐತಿಹಾಸಿಕ ಕ್ರಮವೊಂದರಲ್ಲಿ ಜಾತಿ ತಾರತಮ್ಯ ವಿರೋಧಿ ಮಸೂದೆಯನ್ನು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸೆನೆಟ್ ನಲ್ಲಿ ಅಂಗೀಕರಿಸಲಾಗಿದೆ.

ಎಸ್ಬಿ 403 ಮಸೂದೆಯನ್ನು  ಸೆನೆಟ್ ನಲ್ಲಿ 34-1 ಮತಗಳಿಂದ ಅಂಗೀಕರಿಸಲಾಗಿದ್ದು, ತನ್ನ ತಾರತಮ್ಯ ವಿರೋಧಿ ಕಾನೂನುಗಳಲ್ಲಿ ಸಂರಕ್ಷಿತ ವರ್ಗವಾಗಿ ಜಾತಿಯನ್ನು ಸೇರಿಸಿದ ಮೊದಲ ರಾಜ್ಯವಾಗಿ ಕ್ಯಾಲಿಫೋರ್ನಿಯಾ ಗುರುತಿಸಿಕೊಂಡಿದೆ. ಹೌಸ್ ಆಫ್ ರೆಪ್ರೆಸೆಂಟೇಟಿವ್(ಸಂಸತ್ತಿನ ಮೇಲ್ಮನೆ)ನಲ್ಲಿ ಮಸೂದೆಯನ್ನು ಮಂಡಿಸಿದ ಬಳಿಕ ಸಹಿಗಾಗಿ ಗವರ್ನರ್ ಕಚೇರಿಗೆ ರವಾನಿಸಲಾಗುವುದು ಎಂದು ಮೂಲಗಳು ಹೇಳಿವೆ.

ಕ್ಯಾಲಿಫೋರ್ನಿಯಾ ಸೆನೆಟರ್ ಆಯಿಷಾ ವಹಾಬ್ ಮಂಡಿಸಿದ ಈ ಮಸೂದೆಯು ಈಗ ಅಸ್ತಿತ್ವದಲ್ಲಿರುವ ಕಾನೂನಿನಡಿ ಜಾತಿಯನ್ನು ಸಂರಕ್ಷಿತ ವರ್ಗವಾಗಿ ಮಾನ್ಯ ಮಾಡಲಿದೆ. ಈ ಕಾನೂನು ಕ್ಯಾಲಿಫೋರ್ನಿಯಾ ರಾಜ್ಯದ ಎಲ್ಲಾ ಜನರನ್ನು ಎಲ್ಲಾ ವ್ಯಾಪಾರ ಸಂಸ್ಥೆಗಳಲ್ಲಿ ಪೂರ್ಣ ಮತ್ತು ಸಮಾನ ವಸತಿ ಸೌಕರ್ಯಗಳು, ಅನುಕೂಲಗಳು, ಸೌಲಭ್ಯಗಳು ಮತ್ತು ಇತರ ಸೇವೆಗಳಿಗೆ ಅರ್ಹರನ್ನಾಗಿಸುತ್ತದೆ. 

Similar News