ನಾಥುರಾಮ್ ಗೋಡ್ಸೆ ಭಾರತದ ಸುಪುತ್ರ: ಕೇಂದ್ರ ಸಚಿವ ಗಿರಿರಾಜ್ ಸಿಂಗ್

Update: 2023-06-10 18:18 GMT

ಹೊಸದಿಲ್ಲಿ, ಜೂ. 10: ಮಹಾತ್ಮಾ ಗಾಂಧಿ ಹಂತಕ ನಾಥುರಾಮ್ ಗೋಡ್ಸೆ ಭಾರತದ ಸುಪುತ್ರ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಶುಕ್ರವಾರ ಪ್ರತಿಪಾದಿಸಿದ್ದಾರೆ. ನಾಥುರಾಮ್ ಗೋಡ್ಸೆ ಮೊಗಲ್ ಆಡಳಿತಗಾರರಾದ ಬಾಬರ್ ಹಾಗೂ ಔರಂಗಜೇಬ್ನಂತೆ ಆಕ್ರಮಣಕಾರರಲ್ಲ ಎಂದು ಅವರು ಹೇಳಿದ್ದಾರೆ. ಛತ್ತೀಸ್ಗಢದ ಬಸ್ತಾರ್ ಜಿಲ್ಲೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ‘‘ಗೋಡ್ಸೆ ಗಾಂಧಿ ಹಂತಕನಾಗಿದ್ದರೆ, ಅವರು ಭಾರತದ ಸುಪುತ್ರರು’’ ಎಂದು ಅವರು ಹೇಳಿದರು.

‘‘ನಾಥುರಾಮ್ ಗೋಡ್ಸೆ ಭಾರತದಲ್ಲಿ ಜನಿಸಿದರು. ಅವರು ಔರಂಗಜೇಬ್ ಹಾಗೂ ಬಾಬರ್ನಂತೆ ಆಕ್ರಮಣಕಾರರಲ್ಲ. ತಮ್ಮನ್ನು ಬಾಬರನ ಪುತ್ರರೆಂದು ಕರೆಸಿಕೊಳ್ಳುವವರು ಭಾರತದ ಸುಪುತ್ರರಾಗಲು ಸಾಧ್ಯವಿಲ್ಲ’’ ಎಂದು ಅವರು ಹೇಳಿದ್ದಾರೆ. ‘‘ಇದ್ದಕ್ಕಿದ್ದಂತೆ, ಕೆಲವು ಜಿಲ್ಲೆಗಳಲ್ಲಿ ಔರಂಗಜೇಬ್ ನ ಸಂತತಿ ಕಾಣಿಸಿಕೊಂಡಿದೆ. ಈ ಸಂತತಿ ಔರಂಗಜೇಬ್ನ ಫೋಟೊ ಪ್ರದರ್ಶಿಸಿದ್ದಾರೆ. ಆತನ ಬಗ್ಗೆ ಸ್ಟೇಟಸ್ (ಸಾಮಾಜಿಕ ಜಾಲ ತಾಣ) ಹಾಕಿಕೊಂಡಿದ್ದಾರೆ. ಇದು ಸಮಾಜದಲ್ಲಿ ಕೆಟ್ಟ ಸಂದೇಶ ರವಾನಿಸುತ್ತದೆ. ಇದ್ದಕ್ಕಿದ್ದಂತೆ ಔರಂಗಜೇಬ್ನ ಹಲವು ಸಂತತಿಗಳು ಎಲ್ಲಿಂದ ಹುಟ್ಟಿಕೊಂಡವು?’’ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಅವರು ಬುಧವಾರ ಪ್ರಶ್ನಿಸಿದ್ದಾರೆ.

Similar News