32 ಕೋಟಿ ರೂ. ತೆರಿಗೆ ಬಾಕಿ; ಮಂತ್ರಿ ಮಾಲ್‍ಗೆ ಬೀಗ ಜಡಿದ ಬಿಬಿಎಂಪಿ
ಬೆಂಗಳೂರು: ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನಲೆಯಲ್ಲಿ ನಗರದ ಮಲ್ಲೇಶ್ವರಂನಲ್ಲಿರುವ ಮಂತ್ರಿ ಮಾಲ್‍ಗೆ ಬಿಬಿಎಂಪಿ ಅಧಿಕಾರಿಗಳು ಮತ್ತೆ ಬೀಗ ಹಾಕಿದ್ದಾರೆ. 51 ಕೋಟಿ ರೂಪಾಯಿಗೂ ಹೆಚ್ಚು ತೆರಿಗೆಯನ್ನು ಮಂತ್ರಿಮಾಲ್ ಉಳಿಸಿಕೊಂಡಿದೆ.
32 ಕೋಟಿ ರೂ. ತೆರಿಗೆ ಪಾವತಿ ಮಾಡುವಂತೆ ಒನ್ ಟೈನ್ ಪೇಮೆಂಟ್ ಅವಕಾಶವನ್ನೂ ಬಿಬಿಎಂಪಿ ಈ ಮೊದಲು ಕೊಟ್ಟಿತ್ತು. ಅದನ್ನೂ ಕಟ್ಟದಿರುವ ಕಾರಣ, ಮಾಲ್‍ನ ಮುಖ್ಯ ಪ್ರವೇಶ ದ್ವಾರಕ್ಕೆ ಬಿಬಿಎಂಪಿ ಅಧಿಕಾರಿಗಳು, ಮಾರ್ಷಲ್ ಹಾಗೂ ಪೊಲೀಸರ ಬಿಗಿ ಭದ್ರತೆಯಲ್ಲಿ ಮಾಲ್‍ಗೆ ಬೀಗ ಹಾಕಿದ್ದಾರೆ.
ಆರ್ಥಿಕವಾಗಿ ಮಾಲ್ ಮುಳುಗಿದೆ ಎನ್ನಲಾಗುತ್ತಿದ್ದು, ಮಂತ್ರಿ ಮಲ್‍ನವರು ಕೆನರಾ ಬ್ಯಾಂಕ್ ನಲ್ಲಿ ನೂರಾರು ಕೋಟಿ ರೂ. ಸಾಲವನ್ನು ಪಡೆದಿದ್ದಾರೆ. ಸಾಲ ಮರುಪಾವತಿಗಾಗಿ ಮಾಲ್ ನ ಆದಾಯದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಮಾಲ್ ನಿಂದ ಬರುವ ಬಾಡಿಗೆ ದುಡ್ಡು ನೇರವಾಗಿ ಸಾಲಕ್ಕೆ ಪಾವತಿಯಾಗುತ್ತಿದೆ ಎಂದು ತಿಳಿದು ಬಂದಿದೆ.
ಮಾಲ್ ನಿರ್ವಹಣೆ ಸಾಲ ನೀಡಿದ ಬ್ಯಾಂಕ್ ಮಾಲ್ ಇರುವ ಕಟ್ಟಡದ ಮೇಲಿನ ಅಂತಸ್ಥಿನಲ್ಲಿದ್ದು, ಬಾಕಿ ತೆರಿಗೆಯನ್ನು ಬ್ಯಾಂಕ್‍ನವರೆ ಕಟ್ಟುವ ಸ್ಥಿತಿ ನಿರ್ಮಾಣವಾಗಿದೆ. ಬಾಡಿಗೆ ಪಾವತಿ ಮಾಡಿದರೂ ಮಾಲ್ ಓಪನ್ ಮಾಡದ ಕಾರಣ ಮಾಲ್‍ನಲ್ಲಿರುವ ಶಾಪ್ ಮಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.