‘ವರಾಹಿ ಯೋಜನೆ’ ಶೀಘ್ರ ಪೂರ್ಣಗೊಳಿಸಲು ಕ್ರಮ : ಡಿ.ಕೆ.ಶಿವಕುಮಾರ್

Update: 2025-03-20 22:04 IST
‘ವರಾಹಿ ಯೋಜನೆ’ ಶೀಘ್ರ ಪೂರ್ಣಗೊಳಿಸಲು ಕ್ರಮ : ಡಿ.ಕೆ.ಶಿವಕುಮಾರ್
  • whatsapp icon

ಬೆಂಗಳೂರು : ವರಾಹಿ ಯೋಜನೆ ಕುರಿತಾಗಿ 1979 ರಿಂದ 2005 ರವರೆಗೆ ಸುಮಾರು 26 ವರ್ಷಗಳ ಕಾಲ ಕೇಂದ್ರ ಪರಿಸರ ಇಲಾಖೆಯ ತಿಳುವಳಿಕೆ ಪತ್ರ ಪಡೆಯಲು ಸಮಯ ಹೋಗಿದೆ. ಇದಾದ ನಂತರ ಈ ಯೋಜನೆಗೆ ಜೀವ ಬಂದಿದ್ದು, ವರಾಹಿ ಯೋಜನೆ ಶೀಘ್ರ ಪೂರ್ಣಗೊಳಿಸಲು ಕ್ರಮ ವಹಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಮಂಜುನಾಥ್ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 1979 ರಲ್ಲಿ ಅಧಿಕಾರಿಗಳು ಅರಣ್ಯ ಇಲಾಖೆಯ ನೀತಿ ನಿಯಮಗಳ ಅರಿವಿಲ್ಲದೆ ಯೋಜನೆ ಮಾಡಿಬಿಟ್ಟಿದ್ದಾರೆ. ಭೂ ಸ್ವಾಧೀನವೇ ಈ ಯೋಜನೆಯ ಪ್ರಮುಖ ವಿಚಾರವಾಗಿದೆ. 1,009 ಎಕರೆ ಪಟ್ಟಾ ಭೂಮಿಯಲ್ಲಿ 765 ಎಕರೆ ಭೂಮಿ ಸ್ವಾಧೀನ ಪಡೆಸಿಕೊಂಡಿದ್ದು, ಇನ್ನೂ 343 ಎಕರೆ ಬಾಕಿಯಿದೆ ಎಂದರು.

813 ಎಕರೆ ಸರಕಾರಿ ಭೂಮಿಯಲ್ಲಿ 714 ಎಕರೆ ಸ್ವಾಧೀನ ಮಾಡಿಕೊಂಡಿದ್ದು, 99 ಎಕರೆ ಬಾಕಿಯಿದೆ. 345 ಎಕರೆ ಅರಣ್ಯ ಭೂಮಿಯಲ್ಲಿ 319 ಎಕರೆ ಸ್ವಾಧೀನ ಮಾಡಿಕೊಂಡಿದ್ದು, 19 ಎಕರೆ ಬಾಕಿಯಿದೆ. ಡೀಮ್ಡ್ ಅರಣ್ಯ ಭೂಮಿಯಲ್ಲಿ 11 ಎಕರೆ ಸ್ವಾಧೀನ ಪಡಿಸಿಕೊಂಡಿದ್ದು, 104 ಎಕರೆ ಬಾಕಿಯಿದೆ. ಸ್ವಾಧೀನಗಳಿಗೆ 73 ಕೋಟಿ ಅವಶ್ಯಕತೆಯಿದೆ ಎಂದು ಅವರು 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News