ಬೆಂಗಳೂರು: ಎಂಎಂವೈಸಿ ವತಿಯಿಂದ ಇಫ್ತಾರ್ ಕೂಟ
Update: 2025-03-23 23:47 IST

ಬೆಂಗಳೂರು: ಎಂಎಂವೈಸಿ ವತಿಯಿಂದ ಇಫ್ತಾರ್ ಕೂಟವು ಲಾಲ್ ಬಾಗ್ ಸಮೀಪದ ಹಕ್ ಹೌಸ್ ನಲ್ಲಿ ಇತ್ತೀಚೆಗೆ ನಡೆಯಿತು.
ಮೆಜೆಸ್ಟಿಕ್ ವಿಸ್ಡಮ್ ಮಸೀದಿಯ ಖತೀಬ್ ಶಾಫಿ ಸಅದಿ ದುಆ ನೇತೃತ್ವ ವಹಿಸಿದರು. ತಿಲಕ್ ನಗರ ಯಾಸೀನ್ ಮಸೀದಿಯ ಖತೀಬ್ ಮುಹಮ್ಮದ್ ಮೌಲ್ವಿ ರಮಳಾನ್ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಅಡಿಷನಲ್ ಅಡ್ವೋಕೇಟ್ ಜನರಲ್ ಶಾಹುಲ್ ಹಮೀದ್, ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತ ಬದ್ರುದ್ದೀನ್ ಕೆ. ಮಾಣಿ, ನಿವೃತ್ತ ಡಿಸಿಪಿ ಜಿ.ಎ ಬಾವಾ, ಲೋಕಾಯುಕ್ತ ಎಸ್‌ಪಿಪಿ ಅಡ್ವೋಕೇಟ್ ಲತೀಫ್ ಬಿ., ಅಡ್ವೋಕೇಟ್ ಮುಝಫ್ಫರ್ ಅಹ್ಮದ್, ಎಂಎಂವೈಸಿ ಗೌರವಾಧ್ಯಕ್ಷ ಡಾ. ಉಮ್ಮರ್ ಹಾಜಿ, ಎಂಎಂವೈಸಿ ಅಧ್ಯಕ್ಷ ಅಬೂಬಕ್ಕರ್ ಜಯನಗರ ಹಾಗೂ ಸದಸ್ಯರು ಉಪಸ್ಥಿತರಿದ್ದರು.