ಸ್ವಯಂ ಘೋಷಿತ ಹಿಂದೂ ಹುಲಿಗಳ ಬಗ್ಗೆ ಕನಿಕರ ಮೂಡುತ್ತಿದೆ : ಪ್ರಿಯಾಂಕ್ ಖರ್ಗೆ

Update: 2025-03-26 20:13 IST
ಸ್ವಯಂ ಘೋಷಿತ ಹಿಂದೂ ಹುಲಿಗಳ ಬಗ್ಗೆ ಕನಿಕರ ಮೂಡುತ್ತಿದೆ : ಪ್ರಿಯಾಂಕ್ ಖರ್ಗೆ
  • whatsapp icon

ಬೆಂಗಳೂರು : ಎಲ್ಲ ಸ್ವಯಂ ಘೋಷಿತ ಹಿಂದೂ ಹುಲಿಗಳ ಬಗ್ಗೆ ಕನಿಕರ ಮೂಡುತ್ತಿದೆ. ವಕ್ಫ್, ಹಲಾಲ್ ಬಜೆಟ್ ಮತ್ತು ಕಾಂಟ್ರಾಕ್ಟ್ ಜಿಹಾದ್‍ಗಾಗಿ ಹೋರಾಡಿದ ರಾಜ್ಯ ಬಿಜೆಪಿ ಹುಲಿಗಳು ಹಾಗೂ ಮಸೀದಿಗಳ ಮುಂದೆ ಡಿಜೆ ಹಾಕಿ ಕುಣಿದವರು, ಹೋಳಿ ಬಣ್ಣ ಎರಚಿದವರು ಈಗ ಮಸೀದಿಗಳ ಮುಂದೆ ಸಾಲುಗಟ್ಟಿ ನಿಂತು ‘ಸೌಗತ್-ಎ-ಮೋದಿ’ ಕಿಟ್‍ಗಳನ್ನು ವಿತರಿಸಲಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ಬುಧವಾರ ಈ ಸಂಬಂಧ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ಈ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ನರೇಂದ್ರ ಮೋದಿ ಸಾಹೇಬರು ಕಾತರರಾಗಿದ್ದಾರೆ. ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ವಾಟ್ಸಾಪ್ ಯೂನಿವರ್ಸಿಟಿಯನ್ನು ಬಿಟ್ಟು, ಸಂವಿಧಾನವನ್ನು ಚೆನ್ನಾಗಿ ಓದಬೇಕು ಹಾಗೂ ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳಿವೆ ಎನ್ನುವ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ವಾಟ್ಸಾಪ್ ಯೂನಿವರ್ಸಿಟಿಯನ್ನೇ ನಂಬಿಕೊಂಡರೆ ಇದೇ ರೀತಿ ತಮ್ಮ ಪಕ್ಷದ ಅನಿರೀಕ್ಷಿತ ಮಾಸ್ಟರ್ ಸ್ಟ್ರೋಕ್ ಗಳಿಂದ ಬೆಪ್ಪರಾಗಬೇಕಾಗುತ್ತದೆ. ಬಿಜೆಪಿಗರಿಗೆ ನನ್ನ ಸಲಹೆ, ಈ ಕಾರ್ಯಕ್ರಮಕ್ಕೆ ಬರುವಾಗ ದಯವಿಟ್ಟು ನಿಮ್ಮ ಅಲ್ಪಸಂಖ್ಯಾತ ಮೋರ್ಚಾಗೆ ಕುಫಿ(ಟೋಪಿ)ಗಳನ್ನು ತರುವುದನ್ನು ಹೇಳಲು ಮರೆಯಬೇಡಿ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News