ಬೀದರ್ | ಟ್ರ್ಯಾಕ್ಟರ್-ಲಾರಿ ನಡುವೆ ಅಪಘಾತ : ಒರ್ವ ಮೃತ್ಯು, ಮೂವರಿಗೆ ಗಾಯ
Update: 2024-12-18 13:22 GMT
ಬೀದರ್ : ಟ್ರ್ಯಾಕ್ಟರ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ, ಒರ್ವ ಮೃತಪಟ್ಟಿದ್ದು, ಮೂವರು ತೀವ್ರ ಗಾಯಗೊಂಡಿರುವ ಘಟನೆ ಹುಮನಾಬಾದ - ಭಾಲ್ಕಿಯ ಮುಖ್ಯ ರಸ್ತೆಯ ದಾಡಗಿ ಕೆರೆ ಹತ್ತಿರ ನಡೆದಿದೆ.
ಸುರೇಶ್ (35) ಮೃತಪಟ್ಟಿದ್ದು, ಆನಂದ್ ಜಾಧವ್ (24), ಸಂಜು (35) ಹಾಗೂ ಅಜಯ್ (22) ಮೂವರಿಗೆ ತೀವ್ರ ಗಾಯವಾಗಿದೆ ಎಂದು ತಿಳಿದುಬಂದಿದೆ.
ಸುರೇಶ್ ಅಂಬೆಸಾಂಗವಿ ಗ್ರಾಮದ ನಿವಾಸಿಯಾಗಿದ್ದು, ಪಕ್ಕದ ಭಾಲ್ಕಿ ಪಟ್ಟಣದಲ್ಲಿ ಕೂಲಿ ಕೆಲಸ ಮಾಡಿ ಬದುಕುತಿದ್ದ. ಇಂದು ಭಾಲ್ಕಿಯಿಂದ ದಾಡಗಿ ಗ್ರಾಮಕ್ಕೆ ಟ್ರ್ಯಾಕ್ಟರಲ್ಲಿ ಇಟ್ಟಿಗೆ ತುಂಬಿಕೊಂಡು ಹೋಗುತ್ತಿರುವಾಗ ಹಿಂದಿನಿಂದ ಬಂದ ಲಾರಿ ಟ್ರ್ಯಾಕ್ಟರಿಗೆ ಗುದ್ದಿದ ಪರಿಣಾಮ ಆತ ಮೃತಪಟ್ಟಿದ್ದಾನೆ. ಇನ್ನುಳಿದ ಮೂವರಿಗೆ ಗಾಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.