ಬೀದರ್ | ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಖಂಡಿಸಿ ರಸ್ತೆ ತಡೆದು ಪ್ರತಿಭಟನೆ

Update: 2024-12-16 13:38 GMT

ಬೀದರ್ : ವಿಳಾಸಪೂರ ಗ್ರಾಮದಲ್ಲಿ ಮಧ್ಯ ರಾತ್ರಿಯ ವೇಳೆ ಕಿಡಿಗೇಡಿಗಳು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ಹುಮನಾಬಾದ್ ಪಟ್ಟಣದಲ್ಲಿ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರವಾಸಿ ಮಂದಿರದಿಂದ ಅಂಬೇಡ್ಕರ್ ಸರ್ಕಲ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಪ್ರಮುಖರಾದ ಅನೀಲ ದೊಡ್ಡಿ, ಗೌತಮ ಪ್ರಸಾದ, ಶೇಕ್ ಮಕ್ಸೂದ್, ಗಣಪತಿ ಅಷ್ಟೂರೆ, ಕೈಲಾಸ ಮೇಟಿ, ಶಿವಾನಂದ ಕಟ್ಟಿಮನಿ, ಸೋಮು ಡಾಂಗೆ, ಮಾಣಿಕ ಮಾಡಗೂಳ, ಜಗದೇವಪ್ಪಾ ಕಾರ್ಪೇಂಟರ್, ಅಹಿಂದ ನಾಯಕರಾದ ಮುಕೆಶ ಪಾಂಡೆ, ಉಮೇಶ ದಾಡಗಿ, ಸಚ್ಚಿನ ಕಲ್ಲೂರ, ವಿನಾಯಕ ಮಂಕೂಜ್, ಈಶ್ವರ ಕ್ರಾಂತಿ, ಸತೀಶ ರತ್ನಕರ ಸೇರಿದಂತೆ ಹಲವರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಡೆಸಿ ತಹಶಿಲ್ದಾರ್ರ ಮುಖಾಂತರ ರಾಜ್ಯಪಾಲರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಆರ್.ಅಶೋಕ ಅವರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News