ಬೀದರ್ | ಸತತ ಪ್ರಯತ್ನವೇ ಸಾಧನೆಯ ಗುಟ್ಟು : ಹಾರಕೂಡ ಶ್ರೀ

Update: 2024-12-18 14:18 GMT

ಬೀದರ್ : ಸತತ ಮತ್ತು ಸರಿಯಾದ ಪ್ರಯತ್ನ ಹಾಗೂ ಪರಿಶ್ರಮ ಅದೇ ರೀತಿ ಕೌಶಲ್ಯ ಪೂರ್ಣ ಜಾಣ್ಮೆಯಿಂದ ಸಾಧನೆ ಕಿರೀಟ ಧರಿಸಬಹುದು ಎಂದು ಹಾರಕೂಡದ ಡಾ.ಚನ್ನವೀರ್ ಶಿವಾಚಾರ್ಯರು ಹೇಳಿದ್ದಾರೆ.

ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬಸವಕಲ್ಯಾಣ ಇವರ ಸಂಯುಕ್ತಶ್ರಯದಲ್ಲಿ ಹಾರಕೂಡ ಶ್ರೀಮಠದಲ್ಲಿ ಪ್ರಸಕ್ತ ಸಾಲಿನ ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಮತ್ತು ಇಂಗ್ಲೀಷ್ ವಿಷಯಗಳ ಕುರಿತು ಶಿಕ್ಷಣ ತಜ್ಞರಿಂದ ಆಯೋಜಿಸಿದ ಶೈಕ್ಷಣಿಕ ಕಾರ್ಯಗಾರದ ಸಾನಿಧ್ಯ ವಹಿಸಿ ಮಾತನಾಡಿದರು.

ಪ್ರತಿ ಮಗುವಿನಲ್ಲಿಯೂ ಅಗಾಧವಾದ ಶಕ್ತಿ ಅಡಗಿರುತ್ತದೆ. ಅದರ ರಚನಾತ್ಮಕ ಬಳಕೆಗೆ ಬೇಕಾಗುವ ಪೂರಕ ವಾತಾವರಣ ಕಲ್ಪಿಸಿಕೊಡುವುದು ಅವಶ್ಯಕವಾಗಿದೆ. ಶಿಕ್ಷಣವು ಹತ್ತನೇ ತರಗತಿಯ ಮಗುವಿನ ವಿಕಾಸದಲ್ಲಿ ಅತಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಪರೀಕ್ಷೆಯನ್ನು ಹಬ್ಬದ ರೀತಿಯಲ್ಲಿ ಸ್ವೀಕರಿಸಬೇಕು. ಯಾವುದೇ ಕಾರಣಕ್ಕೂ ಭಯಭೀತರಾಗಬಾರದು. ವಿಜ್ಞಾನ ಮತ್ತು ಆಂಗ್ಲ ಭಾಷೆಯನ್ನು ಕಠಿಣವೆಂದು ಭಾವಿಸದೆ ಅವುಗಳನ್ನು ಸವಾಲಾಗಿ ಸ್ವೀಕರಿಸಿ, ಸರಳತೆಯಿಂದ ಅಧ್ಯಯನ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

ಶಿಕ್ಷಣ ಇಲಾಖೆ ಏರ್ಪಡಿಸಿದ ಕಾರ್ಯಗಾರ ಅಭಿನಂದನಾರ್ಹವಾಗಿದೆ. ಮಕ್ಕಳು ಇದರ ಲಾಭ ಪಡೆದು ಉತ್ತಮ ಶ್ರೇಯಾಂಕದೊಂದಿಗೆ ತೇರ್ಗಡೆಯಾಗಲೆಂದು ಬಯಸುವೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಸವಕಲ್ಯಾಣ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ರನ್ನುರ್, ಸಿಇಓ ರಾಜಕುಮಾರ ಸಾಲಿ, ಶಾಂತಿ ದೇಸಾಯಿ, ಶಿಕ್ಷಕ ಮಲ್ಲಿನಾಥ ಹಿರೇಮಠ್, ಸಿ. ಆರ್. ಪಿ ಗಳಾದ ಗೋವಿಂದ್ ಚಿಟ್ಟಪಲ್ಲೇ, ವೆಂಕಟರಾವ್ ಕಿಟ್ಟಾ, ಅಣ್ಣೆಪ್ಪಾ ಭೋಸಗಾ, ಲಕ್ಷ್ಮಣ ಹಾರಕೂಡ್, ಪರಮೇಶ್ವರ್ ಹಾರಕೂಡ್, ಪ್ರಕಾಶ ಖೇರ್ಡ್, ದಿಲೀಪ್ ಮುಡಬಿ, ಜಾಕೀರ್ ಹುಸೇನ್ ಕಲಖೋರಾ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಾದೇವ್ ಪೂಜಾರಿ, ಐ.ಜಿ. ಮಠಪತಿ, ಸುನೀತಾ ನಾಲೂರೆ, ಪಂಡಿತ್ ಪೂಜಾರಿ, ಗುಂಡಯ್ಯ ಆಲೂರ್, ರಮೇಶ್ ರಾಜೋಳೆ, ಉಮಾಕಾಂತ್ ಬಂಗೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News