ಬೀದರ್ | ಪ್ರತಾಪೂರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ ಆಕ್ರಮ ಆರೋಪ : ತನಿಖೆಗೆ ಒತ್ತಾಯ
ಬೀದರ್ : ಬಸವಕಲ್ಯಾಣ ತಾಲೂಕಿನ ಪ್ರತಾಪೂರ್ ಗ್ರಾಮ ಪಂಚಾಯತ್‌ನಲ್ಲಿ ನರೇಗಾ ಯೋಜನೆಯಡಿ ಲಕ್ಷಾಂತರ ರೂ. ಆಕ್ರಮ ನಡೆದಿದ್ದು, ಮಾನವ ಬಂಧುತ್ವ ವೇದಿಕೆ ಹಾಗೂ ಗ್ರಾಮದ ಮುಖಂಡರು ತನಿಖೆಗೆ ಒತ್ತಾಯಿಸಿದ್ದಾರೆ.
ಪಂಚಾಯತ್ ಮುಂದೆ ಧರಣಿ ಸತ್ಯಾಗ್ರಹ ನಡೆಸಿ, ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸಿಡಿ ಕಾಮಗಾರಿಗಳನ್ನು ನಿರ್ಮಿಸದೇ ನಕಲಿ ಪೋಟೋಗಳನ್ನು ಸೃಷ್ಟಿಸಲಾಗಿದೆ. ನರೇಗಾ ಕಾಮಗಾರಿ ಅನುಷ್ಠಾನದಲ್ಲಿ ಅಕ್ರಮ ಎಸಗಿದ ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿದರು.
ಫಾರ್ಮೆಷನ್ ರಸ್ತೆಗಳು ನಿರ್ಮಿಸದೇ ಏಳೆಂಟು ನಕಲಿ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗಿ ಒಂದೇ ದಿನದಲ್ಲಿ ನಾಲ್ಕೈದು ಕಾಮಗಾರಿಗಳಲ್ಲಿ ಅವರ ಭಾವಚಿತ್ರಗಳನ್ನು ತೆಗೆದು ಸುಮಾರು ನೂರಾರು ಕಾರ್ಮಿಕರ ನಕಲಿ ದಾಖಲಾತಿಗಳು ಸೃಷ್ಟಿ ಮಾಡುವ ಮೂಲಕ ಅವರ ಸುಳ್ಳು ಹಾಜರಾತಿಯನ್ನು ಹಾಕಿ, ಲಕ್ಷಾಂತರ ರೂ. ಹಗರಣ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆ ತಾಲೂಕಾ ಸಂಚಾಲಕ ಪಿಂಟು ಕಾಂಬಳೆ, ಡಾ.ಬಿ.ಆರ್.ಅಂಬೇಡ್ಕರ್ ಪಂಚ್ ಕಮಿಟಿ ಅಧ್ಯಕ್ಷ ಶೇಷರಾವ್ ಗಾಯಕವಾಡ್, ದಲಿತ್ ಸೇನೆಯ ತಾಲೂಕಾ ಉಪಾಧ್ಯಕ್ಷ ಅರುಣ್ ಗಾಯಕವಾಡ್, ಬಿ.ಎಸ್.ಪಿ ಮುಖಂಡ ಮಕ್ಬುಲಸಾಬ್, ಸುಭಾಷ ಕುದುರೆ, ಗಣೇಶ್ ಕುದುರೆ, ಸಾವನ್ ಗಾಯಕವಾಡ್, ವಿಜಯ್ ಸೂರ್ಯವಂಶಿ, ಸಿದ್ಧಾರ್ಥ್ ಗಾಯಕವಾಡ್, ನಾಗೇಶ್ ಸೂರ್ಯವಂಶಿ, ದಿನೇಶ್ ಜಗತಾಪ್, ನಾಗೇಶ್ ಗಾಯಕವಾಡ್, ಕಲ್ಲಪ್ಪಾ ಸೂರ್ಯವಂಶಿ, ರೋಹನ್ ಗಾಯಕವಾಡ್, ವಿನೋದ್ ಖರ್ಗೆ, ಧನರಾಜ್ ಕಾಂಬಳೆ, ಮಾರುತಿ ಕಾಂಬಳೆ, ಭಾಗ್ಯವಾನ್ ಬಂಡೆ, ಬಸವರಾಜ ದಾವಲಾ, ಸುಜಾತಾ ಪಾಟೀಲ್, ಸುಧಾರಾಣಿ ಗಾಯಕವಾಡ್, ಅಮೃಪಾಲಿ ಚುನೆ, ದೀಕ್ಷಾ ಸೂರ್ಯವಂಶಿ, ಬೆಬೀಸರೋಜಾ, ಮಾಲಾಶ್ರೀ ಖರ್ಗೆ, ನಿಕಿತಾ ಗಾಯಕವಾಡ್, ಸುನೀತಾ, ರೇಣುಕಾ ಭೋಸಲೆ, ಸುನೀತಾ ದತ್ತು, ಮಹಾದೇವಿ ಗೋವರ್ಧನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.