ಶಿವಾಜಿ ಮಹಾರಾಜರ ಇತಿಹಾಸ ಅರಿತರೆ ಉತ್ತಮ ಪ್ರಜೆಗಳಾಗಳು ಸಾಧ್ಯ: ಸಾಗರ ಖಂಡ್ರೆ

Update: 2025-02-19 20:52 IST
ಶಿವಾಜಿ ಮಹಾರಾಜರ ಇತಿಹಾಸ ಅರಿತರೆ ಉತ್ತಮ ಪ್ರಜೆಗಳಾಗಳು ಸಾಧ್ಯ: ಸಾಗರ ಖಂಡ್ರೆ
  • whatsapp icon

ಬೀದರ್ : ವಿದ್ಯಾರ್ಥಿಗಳು, ಯುಕವರು ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಅರಿಯಬೇಕು. ಆವಾಗ ಮಾತ್ರ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯ ಎಂದು ಸಂಸದ ಸಾಗರ್ ಖಂಡ್ರೆ ಅಭಿಪ್ರಾಯಪಟ್ಟರು.

ಇಂದು ಭಾಲ್ಕಿ ನಗರದ ಪುರಭವನದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ನಡೆದ ಛತ್ರಪತಿ ಶಿವಾಜಿ ಮಹಾರಾಜ್ ಅವರ ಜಯಂತಿ ಮಹೋತ್ಸವ ಉಧ್ಘಾಟನೆ ಮಾಡಿ ಅವರು ಮಾತನಾಡಿದರು.

ಯುವಕರು ದೇಶಾಭಿಮಾನಿಗಳಾಗಿ ಬದುಕಬೇಕು. ದೇಶದ ಪರವಾಗಿ ಜೀವ ತ್ಯಾಗಮಾಡಲೂ ತಯಾರಿರಬೇಕು. ತಾಯಿಯ ಮಾರ್ಗದರ್ಶನದಿಂದಲೇ ಶಿವಾಜಿ ಮಹಾರಾಜರು ಉತ್ತಮ ಮಟ್ಟಕ್ಕೇರಲು ಸಾಧ್ಯವಾಯಿತು. ಎಲ್ಲಾ ತಾಯಂದರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಮಲ್ಲಿಕಾರ್ಜುನ್ ವಡ್ಡನಕೇರಿ, ತಾಲ್ಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ್ ಬಿರಾದಾರ್, ಸಾಹಿತಿ ನಾಗೇಶ್ವರಿ ಜಗತಾಪ್, ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ್ ಸಿಂದನಕೇರೆ, ಉಪಾಧ್ಯಕ್ಷ ವಿಜಯಕುಮಾರ್ ರಾಜಭವನ್, ಡಿವೈಎಸ್ಪಿ ಶಿವಾನಂದ್ ಪವಾಡಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಜಿ ಹಳ್ಳದ್, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ್ ಕಾರಬಾರಿ, ಮಲ್ಲಿಕಾರ್ಜುನ್ ಕನ್ನಾಳೆ, ಸಹದೇವ್ ಜಿ, ತೋಟಗಾರಿಕೆ ಇಲಾಖೆ ಅಧಿಕಾರಿ ಮಾರುತಿ ಜಬನೂರ್, ಕೃಷಿ ಅಧಿಕಾರಿ ಪಿ.ಮಲ್ಲಿಕಾರ್ಜುನ್ ಹಾಗೂ ಸಿಪಿಐ ಅಮರೇಶ.ಬಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News