ಮಂಗಳೂರು| ರಾಮ-ಲಕ್ಷ್ಮಣ ಜೋಡುಕರೆ ಕಂಬಳ ಕೂಟ ಸಮಾರೋಪ:171 ಜೊತೆ ಕೋಣಗಳ ಸ್ಪರ್ಧೆ

Update: 2024-12-29 16:09 GMT

ಸಂಸದ ಬ್ರಿಜೇಶ್ ಚೌಟ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು

ಮಂಗಳೂರು: ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ, ಸಂಸದ  ಬ್ರಿಜೇಶ್ ಚೌಟ ನೇತೃತ್ವದಲ್ಲಿ ಬಂಗ್ರಕೂಳೂರಿನ ಗೋಲ್ಡ್‌ ಫಿಂಚ್‌ ಸಿಟಿಯ ರಾಮ-ಲಕ್ಷ್ಮಣ ಜೋಡು ಕರೆಯಲ್ಲಿ 8ನೇ ವರ್ಷದ ಕಂಬಳಕೂಟ ದಲ್ಲಿ171 ಜೊತೆ ಓಟದ ಕೋಣಗಳು ಎರಡು ದಿನಗಳಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿವೆ.

ಶನಿವಾರ ಹಗಲು ರಾತ್ರಿ ಮತ್ತು ರವಿವಾರ ನಡೆದ ಕಂಬಳದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ಬೋಳದ ಗುತ್ತು ಸತೀಶ್ ಶೆಟ್ಟಿಯ "ಬಿ" ತಂಡ ಪ್ರಥಮ (11.53) ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ, ದ್ವಿತೀಯ: ಮಂಗಳೂರು ಬಜಾಲ್ ಶೈಲೇಶ್ ಶೆಟ್ಟಿ (11.59) ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ,

ನೇಗಿಲು ಕಿರಿಯ: ಪ್ರಥಮ: ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ "ಎ" (11.80) ಓಡಿಸಿದವರು: ಪಟ್ಟೆ ಗುರು ಚರಣ್, ದ್ವಿತೀಯ: ಮುನಿಯಾಲು ಉದಯ ಕುಮಾರ್ ಶೆಟ್ಟಿ "ಎ" (12.46) ಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್.

ಕನೆಹಲಗೆ ವಿಭಾಗದಲ್ಲಿ ಭಾಗವಹಿಸಿದ 7 ಜೊತೆ ಕೋಣಗಳು ನಿಶಾನೆಗೆ ನೀರು ಹಾಯಿಸಿ ಉತ್ತಮ ಸಾಧನೆ ಮಾಡಿದ ಕಾರಣ ಸಮಾನ ಬಹುಮಾನ ಪಡೆದುಕೊಂಡಿದೆ.

ಬೊಳ್ಳಂಬಳ್ಳಿ ಶ್ರೀ ರಾಮ ಚೈತ್ರ ಪರಮೇಶ್ವರ ಭಟ್, ಹಲಗೆ ಮುಟ್ಟಿದವರು: ಭಟ್ಕಳ ಪಾಂಡು ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ, ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ, ಹಲಗೆ ಮುಟ್ಟಿದವರು: ಭಟ್ಕಳ ಪಾಂಡು, ವಾಮಂಜೂರು ತಿರುವೈಲುಗುತ್ತು ಅಭಿಷೇಕ್ ನವೀನ್ಚಂದ್ರ ಆಳ್ವ,ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ, ಬೋಳಾರ ತ್ರಿಶಾಲ್ ಕೆ ಪೂಜಾರಿ,ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಮುದ್ದುಮನೆ ಭರತ್ ನಾಯ್ಕ್, ಬಾರ್ಕೂರು ಶಾಂತಾರಾಮ ಶೆಟ್ಟಿ, ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ, ನಿಡ್ಡೋಡಿ ಕಾನ ರಾಮ ಸುವರ್ಣ, ಹಲಗೆ ಮುಟ್ಟಿದವರು: ಕೊಕ್ಕರ್ಣೆ ವಡಾಪಿ ಸುರೇಶ್ ನಾಯ್ಕ್

*ಅಡ್ಡ ಹಲಗೆ:-ಪ್ರಥಮ: ನಾರಾವಿ ಯುವರಾಜ್ ಜೈನ್ ಕಂಬಳಾಭಿಮಾನಿ ವಕೀಲರ ವೃಂದ ಮಂಗಳೂರು "ಎ" ಹಲಗೆ ಮುಟ್ಟಿದವರು: ಭಟ್ಕಳ ಹರೀಶ್, ದ್ವಿತೀಯ: ನಾರಾವಿ ಯುವರಾಜ್ ಜೈನ್ ಕಂಬಳಾಭಿಮಾನಿ ವಕೀಲರ ವೃಂದ ಮಂಗಳೂರು "ಬಿ",ಹಲಗೆ ಮುಟ್ಟಿದವರು: ಭಟ್ಕಳ ಹರೀಶ್, ಹಗ್ಗ ಹಿರಿಯ: -ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ "ಎ" (11.86), ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ,ದ್ವಿತೀಯ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ "ಬಿ" (12.06), ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ.

ಹಗ್ಗ ಕಿರಿಯ:-ಪ್ರಥಮ: ಮಾಳ ಕಲ್ಲೇರಿ ಭರತ್ ಶರತ್ ಶೆಟ್ಟಿ (11.72) ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ,ದ್ವಿತೀಯ: 80 ಬಡಗ ಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ "ಬಿ" (11.90),ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ ಬಹುಮಾನ ಗಳಿಸಿದ್ದಾರೆ.

ಮಂಗಳೂರು ಕಂಬಳದಲ್ಲಿ ಈ ಬಾರಿ ಕನೆಹಲಗೆ ವಿಭಾಗದಲ್ಲಿ 07 ಜೊತೆ ಅಡ್ಡಹಲಗೆ 08 ಜೊತೆ ,ಹಗ್ಗ ಹಿರಿಯ 20 ಜೊತೆ, ನೇಗಿಲು ಹಿರಿಯ 32 ಜೊತೆ, ಹಗ್ಗ ಕಿರಿಯ 23 ಜೊತೆ ,ನೇಗಿಲು ಕಿರಿಯ 81 ಜೊತೆ ಸೇರಿ ಒಟ್ಟು 171 ಜೊತೆ ಕೋಣ ಗಳು ದಕ್ಷಿಣ ಕನ್ನಡ, ಉಡುಪಿ,ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿ ಸ್ಪರ್ಧಾ ಕಣದಲ್ಲಿದ್ದವು.







Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News