ದ್ವೇಷ ಭಾಷಣ ಪ್ರಕರಣ: ಕಲ್ಲಡ್ಕ ಭಟ್ ವಿಚಾರಣೆಗೆ ಹಿರಿಯ ವಕೀಲ ಎಸ್.ಬಾಲನ್ ಎಸ್ ಪಿಪಿ ಆಗಿ ನೇಮಕ

Update: 2024-03-21 08:51 GMT

ಕಲ್ಲಡ್ಕ ಪ್ರಭಾಕರ ಭಟ್ | ಹಿರಿಯ ವಕೀಲ ಎಸ್. ಬಾಲನ್

ಬೆಂಗಳೂರು, ಮಾ.21:ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ದ್ವೇಷ ಭಾಷಣ ಪ್ರಕರಣದ ನ್ಯಾಯಾಲಯದ ವಿಚಾರಣೆಗೆ ಹಿರಿಯ ವಕೀಲ ಎಸ್.ಬಾಲನ್ ಅವರನ್ನು ಎಸ್ ಪಿಪಿ (ವಿಶೇಷ ಸರ್ಕಾರಿ ವಕೀಲ)ರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮಾ.7ರಂದು ಈ ಆದೇಶ ಹೊರಡಿಸಲಾಗಿದ್ದು, ಪ್ರಭಾಕರ ಭಟ್ ವಿರುದ್ದದ ಪ್ರಕರಣದ ವಿಚಾರಣೆಗೆ ಸರ್ಕಾರ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಪ್ರಗತಿಪರ ಚಿಂತಕರು, ಇದುವರೆಗೆ 20 ಕ್ಕೂ ಹೆಚ್ಚು ದ್ವೇಷ ಭಾಷಣ ಕೇಸ್ ಗಳಿಂದ ಖುಲಾಸೆಗೊಂಡಿರುವ, ಹಲವು ಪ್ರಕರಣಗಳನ್ನು ಹೈಕೋರ್ಟ್ ಮೂಲಕ ರದ್ದು ಪಡಿಸಿಕೊಂಡಿರುವ ಪ್ರಭಾಕರ ಭಟ್ ಗೆ ಶ್ರೀರಂಗಪಟ್ಟಣ ಕೇಸ್ ನಲ್ಲಿ ಮಾತ್ರ ಕನಿಷ್ಟ ತಡೆಯಾಜ್ಞೆ ಸಿಕ್ಕಿಲ್ಲ. ನಾವು ಒಂದು ತಂಡವಾಗಿ ಎಸ್ ಬಾಲನ್ ಅವರ ಮೂಲಕ ಮಧ್ಯಪ್ರವೇಶ ಮಾಡಿರುವುದು ಇದಕ್ಕೆ ಕಾರಣ. ಬಾಲನ್ ಅವರ ಪ್ರಖರ ವಾದದ ಕಾರಣಕ್ಕಾಗಿಯೇ ಶ್ರೀರಂಗಪಟ್ಟಣ ನ್ಯಾಯಾಲಯವು ಪ್ರಭಾಕರ ಭಟ್ ಗೆ "ದ್ವೇಷ ಭಾಷಣ ಪುನಾರಾವರ್ತಿಸುವಂತಿಲ್ಲ. ಇನ್ನೊಂದು ದ್ವೇಷ ಭಾಷಣ ಪ್ರಕರಣ ದಾಖಲಾದರೆ ಜಾಮೀನು ರದ್ದಾಗುತ್ತದೆ ಎಂದು ಆದೇಶ ನೀಡಿದೆ. ಈಗ ನಮ್ಮ ಜನಪರ ವಕೀಲರನ್ನು ಪ್ರಭಾಕರ ಭಟ್ ವಿರುದ್ದದ ಪ್ರಕರಣದ ವಿಚಾರಣೆಗೆ ಸರ್ಕಾರ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸಿದೆ. ಸಂತ್ರಸ್ತ, ಅವಮಾನಿತ ಸಮುದಾಯಕ್ಕೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News