ಮಲಾರ್ ಅಬ್ದುಲ್ ನಾಸಿರ್ ನಿಧನ
Update: 2024-01-19 05:55 GMT
ಮಂಗಳೂರು, ಜ.19:ನಗರದ ತೌಹೀದ್ ಬ್ಯಾಗ್ ಹೌಸ್ ಮತ್ತು ರೆಡಿಮೇಡ್ ಗಾರ್ಮೆಂಟ್ಸ್ ನ ಮಾಲಕ, ಮಲಾರ್ ಪಿ.ಕೆ.ಅಬ್ದುಲ್ ನಾಸಿರ್ (57) ಇಂದು ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೂಲತಃ ಮಲಾರ್ ನಿವಾಸಿಯಾಗಿದ್ದ ಇವರು ಕೆಲವು ವರ್ಷದಿಂದ ತೊಕ್ಕೊಟ್ಟಿನಲ್ಲಿ ವಾಸವಾಗಿದ್ದರು. ಅಲ್ ಬಯಾನ್ ಅರಬಿಕ್ ಕಾಲೇಜಿನ ಕೋಶಾಧಿಕಾರಿಯಾಗಿದ್ದ ಇವರು ಸಲಫಿ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.