ಹಾಜಿ ಇಜ್ಜಬ್ಬ ಎರ್ಮಾಳು

Update: 2024-09-29 11:26 GMT

ಪಡುಬಿದ್ರಿ: ಎರ್ಮಾಳು ಬಡಾ ನಿವಾಸಿ ಹಾಜಿ ಇಜ್ಜಬ್ಬ ಎರ್ಮಾಳ್ (72 )ರವಿವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.

ಉಡುಪಿ ಜಿಲ್ಲೆಯ ಸಮಸ್ತದ ಹಿರಿಯ ನಾಯಕ, ಉಡುಪಿ ರೇಂಜ್ ಮದರಸ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ ಹಲವಾರು ವರ್ಷಗಳ ಕಾಲ ಎರ್ಮಾಳ್ ಬಡಾ ಅಲ್ ಮದ್ರಸತ್ತುದೀನಿಯ್ಯಾತ್ ಮದರಸದ ಅಧ್ಯಕ್ಷರಾಗಿದ್ದರು.

ಅವರು ಪತ್ನಿ, ಇಬ್ಬರು ಪುತ್ರರು 3 ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಇವರ ನಿಧನದಿಂದ ಉಡುಪಿ ಜಿಲ್ಲೆಯು ಓರ್ವ ಸುನ್ನಿ ನಾಯಕರನ್ನು ಕಳೆದುಕೊಂಡಿದೆ ಎಂದು ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಎಂ.ಪಿ. ಮೊಯಿದಿನಬ್ಬ , ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಸಮಸ್ತ ಮದ್ರಸ ಆಡಳಿತ ಸಮಿತಿ ಅಸೋಸಿಯೇಶನ್, ಉಡುಪಿ ಜಿಲ್ಲಾ ಎಸ್‍ಕೆಎಸ್‍ಎಸ್‍ಎಫ್ ಸಂಘಟನೆ ಪದಾಧಿಕಾರಿಗಳು, ಎರ್ಮಾಳ್ ಜಾಮಿಯ ಮಸೀದಿ ಆಡಳಿತ ಸಮಿತಿ, ಎರ್ಮಾಳ್ ಮದ್ರಸ ಆಡಳಿತ ಸಮಿತಿ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್