ಗಣೇಶ್ ರಾವ್

Update: 2024-10-13 13:06 GMT

ಮೂಡುಬಿದಿರೆ: ಇಲ್ಲಿನ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ನ ಗೌರವಾಧ್ಯಕ್ಷ, ವಿದ್ಯುತ್ ಗುತ್ತಿಗೆದಾರ ಗಣೇಶ್ ರಾವ್ (57) ಅವರು ಹೃದಯಾಘಾತಕ್ಕೊಳಗಾಗಿ ಶನಿವಾರ ರಾತ್ರಿ ನಿಧನ ಹೊಂದಿದರು.

ಪ್ರಾಂತ್ಯ ಗಾಮದ ವಿಶಾಲ್ ನಗರ ನಿವಾಸಿಯಾಗಿರುವ ಗಣೇಶ್ ರಾವ್ ಅವರು ಮೂಡುಬಿದಿರೆಯಲ್ಲಿ ಹಲವು ವರ್ಷಗಳಿಂದ ವಿದ್ಯುತ್ ಗುತ್ತಿಗೆದಾರರಾಗಿ ದುಡಿಯುತ್ತಿದ್ದರು. ಅಲ್ಲದೆ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ನ ಸ್ಥಾಪಕ ಸದಸ್ಯರಾಗಿದ್ದ ಅವರು 20 ವರ್ಷಗಳ ಕಾಲ ಅಧ್ಯಕ್ಷರಾಗಿ ಹಾಗೂ ಎರಡು ಅವಧಿಗೆ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಇವರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್