ಮುಹಮ್ಮದ್ ಮುಸ್ತಫಾ

Update: 2024-10-14 17:00 GMT

ಸುರತ್ಕಲ್ : ಇಲ್ಲಿನ ಕಾಟಿಪಳ್ಳ ಇಂಜಿನಿಯರ್ ಮುಹಮ್ಮದ್ ಇಕ್ಬಾಲ್ ಅವರ ಹಿರಿಯ ಸಹೋದರ ಮುಹಮ್ಮದ್ ಮುಸ್ತಫಾ (58) ರವಿವಾರ ತಡರಾತ್ರಿ ಸೌದಿ ಅರೆಬಿಯಾದ ಬಥಾ ಎಂಬಲ್ಲಿ ನಿಧನ ಹೊಂದಿದರು.

ಇವರು ಸೌದಿ ಅರೆಬಿಯಾದ ಬಥಾ ಎಂಬಲ್ಲಿ ಬುರ್ಖಾ ಮಳಿಗೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು‌. ರವಿವಾರ ತಡರಾತ್ರಿ ನಿಧನರಾದರು ಎಂದು ತಿಳಿದು ಬಂದಿದೆ‌.

ಅವರು ತಂದೆ, ತಾಯಿ, ಎಂಟು ಮಂದಿ ಸಹೋದರ ಸಹೋದರಿಯರು ಪತ್ನಿ, ಓರ್ವ ಗಂಡು ಮತ್ತು ಓರ್ವ ಹೆಣ್ಣು ಮಗಳನ್ನು ಅಗಲಿದ್ದಾರೆ.

ಇವರ ಜನಾಝ ಸೌದಿ ಅರೆಬಿಯಾದ ಮಸೀದಿಯಲ್ಲಿ ಸೋಮವಾರ ದಫನ ಕಾರ್ಯ ನಡೆಯಲಿದೆ ಎಂದು ಅವರ ಸಹೋದರ ಇಂಜಿನಿಯರ್ ಮುಹಮ್ಮದ್ ಇಕ್ಬಾಲ್ ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಗಣೇಶ್ ರಾವ್
ಸುಶೀಲಾ
ಪ್ರಭಾಕರ