ಅಬುಧಾಬಿ: ಕೆಸಿಎಫ್ ಮೀಲಾದ್ ಸಮಾವೇಶಕ್ಕೆ ಸ್ವಾಗತ ಸಮಿತಿ ರಚನೆ
ಅಬುಧಾಬಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್.) ಅಬುಧಾಬಿ ಝೋನ್ ವತಿಯಿಂದ ಆಯೋಜಿಸಲ್ಪಡುವ ವಿಶ್ವ ಪ್ರವಾದಿ ಪೈಗಂಬರ್(ಸ.)ರ 1499ನೇ ಮೀಲಾದ್ ಸಮಾವೇಶದ ಯಶಸ್ವಿಗೆ ಸ್ವಾಗತ ಸಮಿತಿಯನ್ನು ಇತ್ತೀಚೆಗೆ ಅಬುಧಾಬಿ ಕೆಸಿಎಫ್ ಸಭಾಭವನದಲ್ಲಿ ರಚಿಸಲಾಯಿತು.
ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಹಾಜಿ ಜಲ್ಲಿ, ಕನ್ವೀನರ್ ರಾಗಿ ಉಮರ್ ಈಶ್ವರಮಂಗಲ, ಕೋಶಾಧಿಕಾರಿಯಾಗಿ ಸಿದ್ದೀಕ್ ಎನ್.ಕೆ., ಸಲಹೆಗಾರರಾಗಿ ಅಬ್ದುಲ್ ಹಮೀದ್ ಸಅದಿ, ಪಿ.ಒಂ.ಎಚ್ ಈಶ್ವರಮಂಗಲ, ಇಬ್ರಾಹೀಂ ಸಖಾಫಿ ಕೆದುಂಬಾಡಿ, ಕೆ.ಎಚ್.ಸಖಾಫಿ ಈಶ್ವರಮಂಗಲ, ಹಾಜಿ ಮುಹಮ್ಮದ್ ಅಲಿ ವಳವೂರ್, ಇಬ್ರಾಹೀಂ ಬ್ರೈಟ್ ಮಾರ್ಬಲ್, ಇಕ್ಬಾಲ್ ಕುಂದಾಪುರ. ಕಾರ್ಯ ನಿರ್ವಾಹಕರಾಗಿ ಮುಹಮ್ಮದ್ ಹಸನ್ ಹಾಜಿ, ಸಿದ್ದೀಕ್ ಕೆ.ಎಚ್. ಇತರ ಕಾರ್ಯಕ್ರಮದ ಯಶಸ್ವಿಗಾಗಿ ಹಕೀಂ ತುರ್ಕಳಿಕೆ, ಹಸೈನಾರ್ ಅಮಾನಿ ಅಜ್ಜಾವರ, ಕಬೀರ್ ಬಾಯಂಬಾಡಿ, ನವಾಝ್ ಹಾಜಿ, ಹಾರಿಸ್ ಸಅದಿ, ಅಶ್ರಫ್ ಮುಸ್ಲಿಯಾರ್ ಕನ್ಯಾಡಿ, ನಿಝಾರ್ ಕುಂಬ್ಳೆ, ಇಂಜಿನಿಯರ್ ಅರ್ಶದ್, ಶರೀಫ್ ಕಾಜೂರ್, ಫಾರೂಕ್ ಸಖಾಫಿ, ಹಾಫಿಲ್ ಸಈದ್ ಹನೀಫಿ, ಅಮೀರ್ ಚಿಕ್ಕಮಗಳೂರು, ಮುಸ್ತಫ ಸಖಾಫಿ, ರಜಬ್ ನಾವುಂದ, ಶರೀಫ್ ಬೊಳ್ಮಾರ್, ಸುಹೈಲ್ ಬಜ್ಪೆ, ಹಮೀದ್ ಮುಸ್ಲಿಯಾರ್ ಕುಪ್ಪೆಟ್ಟಿ, ಹಿದಾಯತ್ ಕೊಡಗು ಒಳಗೊಂಡ ಮೀಲಾದ್ ಸಮಾವೇಶದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
'ಮುತ್ತು ನಬಿ ಮನುಕುಲದ ಮಾರ್ಗದರ್ಶಿ' ಎಂಬ ಶೀರ್ಷಿಕೆಯೊಂದಿಗೆ ಸೆಪ್ಟಂಬರ್ 8ರಂದು ಸಂಜೆ ಅಬುಧಾಬಿ ನಗರದ ಇಂಡಿಯನ್ ಇಸ್ಲಾಮಿಕ್ ಸೆಂಟರ್ ನಲ್ಲಿ ನಡೆಯುವ ಮೀಲಾದ್ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಕೇರಳದ ಧಾರ್ಮಿಕ ವಿದ್ವಾಂಸ ಸೈಯದ್ ಅಬ್ದುರ್ರಹ್ಮಾನ್ ಆಟ್ಟೀರಿ ತಂಙಳ್ ಭಾಗವಹಿಸುವರು. ಅವರಲ್ಲದೇ, ಸಾಮಾಜಿಕ ಧಾರ್ಮಿಕ ಮತ್ತು ಉದ್ಯಮ ಕ್ಷೇತ್ರದ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಕೆಸಿಎಫ್ ಪ್ರಕಟನೆ ತಿಳಿಸಿದೆ.