ಗಾಝಾ ಕದನ ವಿರಾಮ ನಾಳೆಯಿಂದ ಜಾರಿ: ಖತರ್
Update: 2023-11-23 16:30 GMT
ದೋಹ : ಗಾಝಾದಲ್ಲಿ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ನವೆಂಬರ್ 24(ಶುಕ್ರವಾರ)ರಿಂದ ಆರಂಭಗೊಳ್ಳಲಿದೆ ಎಂದು ಖತರ್ ವಿದೇಶಾಂಗ ಸಚಿವಾಲಯ ಗುರುವಾರ ಹೇಳಿದೆ.
ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದ ಕದನ ವಿರಾಮ ಜಾರಿಗೆ ಬರಲಿದೆ. ಸಂಜೆ ಸುಮಾರು 4 ಗಂಟೆಗೆ ಒತ್ತೆಯಾಳುಗಳ ಪ್ರಥಮ ತಂಡದಲ್ಲಿ 13 ಮಂದಿಯನ್ನು ಬಿಡುಗಡೆಗೊಳಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಜೀದ್ ಅಲ್-ಅನ್ಸಾರಿ ಮಾಹಿತಿ ನೀಡಿದ್ದಾರೆ. ಗಾಝಾ ಕದನ ವಿರಾಮ ಶುಕ್ರವಾರದಿಂದ ಜಾರಿಗೆ ಬರಲಿದೆ ಎಂದು ಹಮಾಸ್ ಕೂಡಾ ದೃಢಪಡಿಸಿದೆ