ದುಬೈಗೆ ಆಗಮಿಸಿದ ಪುತ್ತೂರು ಶಾಸಕ ಅಶೋಕ್ ರೈ ಅವರನ್ನು ಭೇಟಿಯಾದ ಇಂಡಿಯನ್ ಓವರ್ ಸೀಸ್ ಕಾಂಗ್ರೆಸ್ ಯುಎಇ ಘಟಕ

Update: 2023-09-22 14:47 IST
ದುಬೈಗೆ ಆಗಮಿಸಿದ ಪುತ್ತೂರು ಶಾಸಕ ಅಶೋಕ್ ರೈ ಅವರನ್ನು ಭೇಟಿಯಾದ ಇಂಡಿಯನ್ ಓವರ್ ಸೀಸ್ ಕಾಂಗ್ರೆಸ್ ಯುಎಇ ಘಟಕ
  • whatsapp icon

ದುಬೈ: ಕುಟುಂಬ ಸಮೇತ ಯುಎಇ ಪ್ರವಾಸದಲ್ಲಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರನ್ನು ಇಂಡಿಯನ್ ಓವರ್ ಸೀಸ್ ಕಾಂಗ್ರೆಸಿನ ಸದಸ್ಯರು ಭೇಟಿ ಮಾಡಿದರು.

ಶಾಸಕರು ತಂಗಿದ್ದ ಪ್ರತಿಷ್ಠಿತ ಜುಮೇರಾ ಲೇಕ್ ಟವರ್ ತಾಜ್ ಹೋಟೇಲಿಗೆ ಭೇಟಿ ಕೊಟ್ಟ ಐಓಸಿ ಘಟಕದ ಸದಸ್ಯರು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು.

ಈ ವೇಳೆ ತನ್ನ ಗೆಲುವಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಐಒಸಿ ಕಾರ್ಯಕರ್ತರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಐಒಸಿ ವತಿಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಶಾಸಕರನ್ನು ಇದೇ ಸಂದರ್ಭದಲ್ಲಿ ಆಮಂತ್ರಿಸಲಾಯಿತು.

ಈ ಸಂದರ್ಭದಲ್ಲಿ ಇಂಡಿಯನ್ ಓವರ್ ಸೀಸ್ ಕಾಂಗ್ರೆಸ್ ಯುಎಇ ಘಟಕದ ಸದಸ್ಯರಾದ ಪರ್ವೇಝ್ ಜಿಕೆ,ಇಕ್ಬಾಲ್ ಕಣ್ಣೂರು,ಅನ್ವರ್ ಮಾಣಿಲ,ಮೂಸಾ ಪೆರುವಾಯಿ ಮತ್ತು ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News