ಬಾಂಗ್ಲಾ ವಿರುದ್ಧ ಭರ್ಜರಿ ಜಯದ ಹೊರತಾಗಿಯೂ 2ನೇ ಸ್ಥಾನದಲ್ಲೇ ಉಳಿದ ಭಾರತ

Update: 2023-10-20 02:17 GMT

Photo: X/ hardikpandya7

ಹೊಸದಿಲ್ಲಿ: ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಅಭಿಯಾನದ ತಮ್ಮ ನಾಲ್ಕನೇ ಪಂದ್ಯದಲ್ಲಿ ಕೂಡಾ ನೇರ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ ಅವರ ಅದ್ಭುತ ಶತಕದ ನೆರವಿನಿಂದ ಬಾಂಗ್ಲಾದೇಶ ನೀಡಿದ ಗೆಲುವಿನ ಗುರಿಯನ್ನು ಕೇವಲ 41.3 ಓವರ್ ಗಳಲ್ಲಿ ತಲುಪಿದೆ. ಆದರೆ ಈ ಜಯದ ಹೊರತಾಗಿಯೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಭಾರತ ವಿಫಲವಾಗಿದೆ.

ಉಭಯ ತಂಡಗಳು ಆಡಿದ ಎಲ್ಲ ನಾಲ್ಕು ಪಂದ್ಯಗಳನ್ನು ಗೆದ್ದು ತಲಾ ಎಂಟು ಅಂಕ ಸಂಪಾದಿಸಿದ್ದರೂ, ನಿವ್ವಳ ರನ್ ರೇಟ್ ಆಧಾರದಲ್ಲಿ ನ್ಯೂಝಿಲೆಂಡ್ ಅಗ್ರಸ್ಥಾನಿಯಾಗಿದೆ. ನ್ಯೂಝಿಲೆಂಡ್ +1.923 ನಿವ್ವಳ ರನ್ ರೇಟ್ ಹೊಂದಿದ್ದರೆ ಭಾರತದ ನಿವ್ವಳ ರನ್ ರೇಟ್ +1.659 ಆಗಿದೆ.

ಈ ಎಲ್ಲ ಹಿಂದಿನ ಪಂದ್ಯಗಳಲ್ಲಿ ವಿರೋಧಿ ತಂಡಗಳು ಬಾರಿಸಿದ ರನ್ ಗಳಿಗೆ ಹೋಲಿಸಿದರೆ ಭಾರತದ ಬಿಗಿ ಬೌಲಿಂಗ್ ದಾಳಿಯ ನಡುವೆಯೂ ಬಾಂಗ್ಲಾದೇಶ ಬ್ಯಾಟಿಂಗ್ ಸ್ನೇಹಿ ಪಿಚ್ ನಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತ್ತು. ಆರಂಭದ 14 ಓವರ್ ಗಳಲ್ಲೇ ಬಾಂಗ್ಲಾದೇಶ ವಿಕೆಟ್ ನಷ್ಟವಿಲ್ಲದೇ 90ರನ್ ಭಾರಿಸಿ ಅದ್ಭುತ ಪ್ರದರ್ಶನ ನೀಡಿತ್ತು. ಆದರೆ ನಂತರ ಭಾರತೀಯ ಬೌಲರ್ ಗಳ ಶಿಸ್ತುಬದ್ಧ ಬೌಲಿಂಗ್ ಬಾಂಗ್ಲಾದೇಶದ ಓಟಕ್ಕೆ ಕಡಿವಾಣ ಹಾಕಿತು.

ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ತಲಾ ನಾಲ್ಕು ಅಂಕಗಳೊಂದಿಗೆ ಕ್ರಮವಾಗಿ 3 ಮತ್ತು 4ನೇ ಸ್ಥಾನ ಪಡೆದಿದ್ದರೆ, 2 ಅಂಕ ಪಡೆದ ಇಂಗ್ಲೆಂಡ್ ಐದನೇ ಸ್ಥಾನದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News