ಜಿಮ್ ಮಾಡುವಾಗ ಆಯತಪ್ಪಿ ಕಟ್ಟಡದಿಂದ ಕೆಳಗೆಬಿದ್ದ ಮಹಿಳೆ ಸಾವು

Update: 2024-06-25 22:10 IST
ಜಿಮ್ ಮಾಡುವಾಗ ಆಯತಪ್ಪಿ ಕಟ್ಟಡದಿಂದ ಕೆಳಗೆಬಿದ್ದ ಮಹಿಳೆ ಸಾವು

PC : @CollinRugg

  • whatsapp icon

ಜಕಾರ್ತ : ಟ್ರೆಡ್‍ಮಿಲ್‍ನಲ್ಲಿ ಜಿಮ್ ಮಾಡುತ್ತಿದ್ದಾಗ ಆಯತಪ್ಪಿ ಮೂರನೇ ಮಹಡಿಯ ಕಿಟಕಿಯಿಂದ ಕೆಳಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಇಂಡೊನೇಶ್ಯಾದಲ್ಲಿ ವರದಿಯಾಗಿದೆ.

ಕಟ್ಟಡವೊಂದರ 3ನೇ ಮಹಡಿಯಲ್ಲಿರುವ ಜಿಮ್‍ನಲ್ಲಿ ತೆರೆದ ಕಿಟಕಿಯ ಬಳಿ 22 ವರ್ಷದ ಮಹಿಳೆ ಟ್ರೆಡ್‍ಮಿಲ್(ಚಲಿಸುವ ಸಾಧನ)ನಲ್ಲಿ ದೈಹಿಕ ಕಸರತ್ತು ಮಾಡುತ್ತಿದ್ದಾಗ ಆಯತಪ್ಪಿ ಕಿಟಕಿಯಿಂದ ಕೆಳಗೆ ಬೀಳುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತಕ್ಷಣ ತುರ್ತು ಸೇವಾಪಡೆ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ತಲೆಗೆ ತೀವ್ರ ಏಟು ಬಿದ್ದ ಕಾರಣ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮೃತಪಟ್ಟಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ `ನ್ಯೂಯಾರ್ಕ್ ಪೋಸ್ಟ್' ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News