ರಶ್ಯದಲ್ಲಿ ರೈಲು ಅಪಘಾತ: ಇಬ್ಬರ ಸಾವು, 100ಕ್ಕೂ ಅಧಿಕ ಮಂದಿಗೆ ಗಾಯ
Update: 2024-07-29 17:09 GMT
ಮಾಸ್ಕೋ, ಜು.29: ರಶ್ಯದಲ್ಲಿ ಪ್ರಯಾಣಿಕರ ರೈಲು ಟ್ರಕ್‍ಗೆ ಡಿಕ್ಕಿಯಾಗಿದ್ದು ಕನಿಷ್ಟ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ರಶ್ಯದ ಮಾಧ್ಯಮಗಳು ವರದಿ ಮಾಡಿವೆ.
ತತಸ್ರ್ಥಾನ್ ಪ್ರಾಂತದ ಕರ್ಝಾನ್‍ನಿಂದ ಕಪ್ಪು ಸಮುದ್ರದ ಬಳಿಯ ಅಡ್ಲರ್ ನಗರಕ್ಕೆ ಪ್ರಯಾಣಿಸುತ್ತಿದ್ದ ರೈಲಿನಲ್ಲಿ 800 ಪ್ರಯಾಣಿಕರಿದ್ದರು. ದಕ್ಷಿಣ ವೊಲ್ಗೊಗ್ರಾಡ್ ಪ್ರಾಂತದ ಕೊಟೆಲ್ನಿಕೊವೊ ನಿಲ್ದಾಣದ ಬಳಿ ಟ್ರಕ್‍ಗೆ ಅಪ್ಪಳಿಸಿದಾಗ ಹಲವು ಬೋಗಿಗಳು ಹಳಿ ತಪ್ಪಿವೆ ಎಂದು ವರದಿಯಾಗಿದೆ.