ಫಿಲಿಪ್ಪೀನ್ಸ್ | ಚಂಡಮಾರುತದಿಂದ ಮೃತರ ಸಂಖ್ಯೆ 40ಕ್ಕೆ ಏರಿಕೆ

Update: 2024-10-25 15:51 GMT

PTI

ಮನಿಲಾ : ಫಿಲಿಪ್ಪೀನ್ಸ್ ನಲ್ಲಿ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 40ಕ್ಕೆ ಏರಿಕೆಯಾಗಿದ್ದು ಸಾವಿರಾರು ಮಂದಿಯನ್ನು ತಾತ್ಕಾಲಿಕ ಶಿಬಿರಕ್ಕೆ ಸ್ಥಳಾಂತರಿಸಿರುವುದಾಗಿ ವರದಿಯಾಗಿದೆ.

ಕೆಲವು ಪ್ರದೇಶಗಳಲ್ಲಿ ಎರಡು ದಿನಗಳಲ್ಲೇ ಎರಡು ತಿಂಗಳಿನಷ್ಟು ಪ್ರಮಾಣದ ಮಳೆ ಸುರಿದಿದೆ. ಬಿಕೊಲ್ ಪ್ರದೇಶದಲ್ಲಿ ಅತ್ಯಧಿಕ ನಾಶ-ನಷ್ಟ, ಸಾವು-ನೋವು ಸಂಭವಿಸಿದ್ದು ಇಲ್ಲಿ ನಿರಂತರ ಭೂಕುಸಿತ ಮುಂದುವರಿದಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಬುವ ಪುರಸಭೆ ಪ್ರದೇಶದಲ್ಲಿ ಜಲಾವೃತಗೊಂಡಿರುವ ಮನೆಯ ಛಾವಣಿಯಲ್ಲಿ ಸಿಕ್ಕಿಬಿದ್ದವರನ್ನು ದೋಣಿಗಳನ್ನು ಬಳಸಿ ರಕ್ಷಿಸಲಾಗಿದೆ. ಬಟಾಂಗಸ್ ನಗರದಲ್ಲಿ ಆಸ್ಪತ್ರೆಯೊಂದರ ತುರ್ತು ಚಿಕಿತ್ಸಾ ಕೊಠಡಿ ಮತ್ತು ವಾರ್ಡ್‍ಗೆ ನೀರು ತುಂಬಿದ ಕಾರಣ ಆಸ್ಪತ್ರೆಯ ರೋಗಿಗಳನ್ನು ಸ್ಥಳಾಂತರಿಸಲಾಗಿದೆ. ಬುಲಾಕಾನ್ ಪ್ರಾಂತದಲ್ಲಿನ ನದಿಯಲ್ಲಿ ಮೀನುಗಾರಿಕೆಯ ದೋಣಿ ಮುಳುಗಿದ್ದು ಓರ್ವ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News