ಪಾಕಿಸ್ತಾನ | ಉಗ್ರರ ದಾಳಿಯಲ್ಲಿ 10 ಪೊಲೀಸರ ಸಾವು

Update: 2024-10-25 15:53 GMT

ಸಾಂದರ್ಭಿಕ ಚಿತ್ರ / Photo:NDTV

ಪೇಷಾವರ : ಅಫ್ಘಾನಿಸ್ತಾನದ ಗಡಿಭಾಗದ ಚೆಕ್‍ಪೋಸ್ಟ್ ನ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 10 ಪೊಲೀಸರು ಸಾವನ್ನಪ್ಪಿದ್ದು ಇತರ 7 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

ಪಾಕಿಸ್ತಾನ್ ತಾಲಿಬಾನ್ ದಾಳಿಯ ಹೊಣೆ ವಹಿಸಿಕೊಂಡಿದೆ. ನೈಋತ್ಯ ಖೈಬರ್ ಪಖ್ತೂಂಕ್ವಾ ಪ್ರಾಂತದ ಡೆರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಪೊಲೀಸ್ ಸಹಾಯಕ ಪಡೆಯ ಚೆಕ್‍ಪೋಸ್ಟ್ ಮೇಲೆ ಸುಮಾರು 25 ಭಯೋತ್ಪಾದಕರು ದಾಳಿ ನಡೆಸಿದ್ದಾರೆ.

`ಸುಮಾರು 1 ಗಂಟೆ ತೀವ್ರ ಗುಂಡಿನ ಚಕಮಕಿ ನಡೆದಿದೆ. 10 ಪೊಲೀಸರು ಸಾವನ್ನಪ್ಪಿದ್ದು ಇತರ 7 ಪೊಲೀಸರು ಗಾಯಗೊಂಡಿದ್ದಾರೆ ಎಂದು ಹಿರಿಯ ಗುಪ್ತಚರ ಅಧಿಕಾರಿಯನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News