ಅಮೆರಿಕ: 6 ಮಂದಿಗೆ ಚೂರಿ ಇರಿದ ಆರೋಪಿ ಬಂಧನ

Update: 2024-05-26 16:45 GMT

ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್ : ಅಮೆರಿಕದ ಮ್ಯಾಸಚುಸೆಟ್ಸ್‍ನಲ್ಲಿ ಶನಿವಾರ ವ್ಯಕ್ತಿಯೊಬ್ಬ 6 ಮಂದಿಯನ್ನು ಚೂರಿಯಿಂದ ಇರಿದು ಗಾಯಗೊಳಿಸಿದ್ದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬ್ರೈನ್‍ಟ್ರೀ ನಗರದಲ್ಲಿರುವ ಸಿನೆಮ ಥಿಯೇಟರ್‍ಗೆ ನುಗ್ಗಿದ ಆರೋಪಿ ಅಲ್ಲಿ ನಾಲ್ವರು ಹುಡುಗಿಯರನ್ನು ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ. ಗಾಯಗೊಂಡಿದ್ದ ನಾಲ್ವರನ್ನೂ ಬಾಸ್ಟನ್‍ನ ಆಸ್ಪತ್ರೆಗೆ ದಾಖಲಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲಿಂದ ಪರಾರಿಯಾಗಿದ್ದ ಆರೋಪಿ ಪ್ಲೈಮೌತ್ ನಗರದಲ್ಲಿರುವ ಮೆಕ್‍ಡೊನಾಲ್ಡ್ಸ್ ಮಳಿಗೆಗೆ ನುಗ್ಗಿ 21 ವರ್ಷದ ಮಹಿಳೆ ಮತ್ತು 29 ವರ್ಷದ ಪುರುಷನಿಗೆ ಚೂರಿಯಿಂದ ತಿವಿದು ಗಾಯಗೊಳಿಸಿದ್ದಾನೆ. ಅಲ್ಲಿಂದ ತನ್ನ ಕಾರಿನಲ್ಲಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಪೊಲೀಸರು ಬೆನ್ನಟ್ಟಿ ಹಿಡಿದಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News