ಟರ್ಕಿಯಲ್ಲಿ ಶೂಟೌಟ್ | ಒಬ್ಬ ಮೃತ್ಯು ; ಇಬ್ಬರಿಗೆ ಗಾಯ
Update: 2024-08-19 17:43 GMT
ಅಂಕಾರ : ಸೋಮವಾರ ಟರ್ಕಿಯ ಇಸ್ತಾನ್ಬುಲ್ ನಗರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಫೆಲೆಸ್ತೀನ್ ಪ್ರಜೆ ಸಾವನ್ನಪ್ಪಿದ್ದು ಇತರ ಇಬ್ಬರು ಗಾಯಗೊಂಡಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಉತ್ತರ ಇಸ್ತಾನ್ಬುಲ್ ನ ಕಗಿಥಾನೆ ಜಿಲ್ಲೆಯ ಡಿಲಾವರ್ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಬಳಿ ಸೈಲೆನ್ಸರ್ ಅಳವಡಿಸಿದ್ದ ಸ್ವಯಂಚಾಲಿತ ಗನ್ ಅನ್ನು ಇರಿಸಲಾಗಿತ್ತು. ಚಾಲಕ ಮತ್ತು ಪ್ರಯಾಣಿಕ ಕಾರಿನಲ್ಲಿ ಕುಳಿತೊಡನೆ ಗನ್ ಸಿಡಿದಿದೆ. ಚಾಲಕನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಮೃತಪಟ್ಟಿದ್ದು ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವುದಾಗಿ ಇಸ್ತಾನ್ಬುಲ್ ಗವರ್ನರ್ ಕಚೇರಿಯ ವಕ್ತಾರರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.