ಗಾಝಾದಲ್ಲಿ ಇಸ್ರೇಲ್ ಕಾರ್ಯಾಚರಣೆಯಿಂದ 33 ಇಸ್ರೇಲಿ ಒತ್ತೆಯಾಳುಗಳು ಮೃತ್ಯು : ಹಮಾಸ್
Update: 2024-12-03 16:24 GMT
ಗಾಝಾ : ಗಾಝಾ ಪಟ್ಟಿಯಲ್ಲಿ ಒತ್ತೆಸೆರೆಯಲ್ಲಿ ಇರಿಸಲಾಗಿದದ 33 ಇಸ್ರೇಲಿ ಒತ್ತೆಯಾಳುಗಳು ಇಸ್ರೇಲ್ ನ ಕಾರ್ಯಾಚರಣೆಯ ಕಾರಣ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ ಎಂದು ಹಮಾಸ್ ಘೋಷಿಸಿದೆ.
ಗಾಝಾದಲ್ಲಿ ಒತ್ತೆಯಾಳುಗಳನ್ನು ಇರಿಸಿದ್ದ ಸ್ಥಳದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿರುವ ವೀಡಿಯೊವನ್ನು ಹಾಗೂ ಕೆಲವು ಒತ್ತೆಯಾಳುಗಳು ಕಳುಹಿಸಿರುವ ಸಂದೇಶವನ್ನು ಹಮಾಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹಠಮಾರಿತನ ಮತ್ತು ನಿರಂತರ ಆಕ್ರಮಣಶೀಲತೆ ಶತ್ರು ಕೈದಿಗಳ ಸಾವಿನ ಸಂಖ್ಯೆಯನ್ನು ಹೆಚ್ಚಿಸಿದೆ. ಹುಚ್ಚು ಯುದ್ಧವನ್ನು ಮುಂದುವರಿಸಿದರೆ ಒತ್ತೆಸೆರೆಯಲ್ಲಿರುವ ಪ್ರಜೆಗಳನ್ನು ಶಾಶ್ವತವಾಗಿ ಕಳೆದುಕೊಳ್ಳಬಹುದು. ತಡವಾಗುವ ಮೊದಲು ಕಾರ್ಯನಿರ್ವಹಿಸಿ ಎಂದು ಇಸ್ರೇಲ್ ಗೆ ಹಮಾಸ್ ಎಚ್ಚರಿಕೆ ನೀಡಿದೆ.