30 ವರ್ಷಕ್ಕಿಂತಲೂ ಹಿಂದಿನ 71,000 ಪ್ರಕರಣಗಳು ಹೈಕೋರ್ಟ್‌ಗಳಲ್ಲಿ ಬಾಕಿ

Update: 2023-07-28 17:15 GMT

ಹೊಸದಿಲ್ಲಿ: ಮೂವತ್ತು ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ 71,000ಕ್ಕೂ ಅಧಿಕ ಪ್ರಕರಣಗಳು ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿಯಾಗಿವೆ ಎಂದು ಲೋಕಸಭೆಗೆ ಶುಕ್ರವಾರ ತಿಳಿಸಲಾಯಿತು.

ಮೂವತ್ತು ವರ್ಷಗಳಿಗಿಂತಲೂ ಹಿಂದಿನ 1.01 ಲಕ್ಷ ಪ್ರಕರಣಗಳು ಕೆಳಗಿನ ನ್ಯಾಯಾಲಯಗಳಲ್ಲಿ ಬಾಕಿಯಾಗಿವೆ ಎಂಬುದಾಗಿಯೂ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಹೇಳಿದರು.

ಈ ವರ್ಷದ ಜುಲೈ 24ರ ವೇಳೆಗೆ, 30 ವರ್ಷಗಳಿಗೂ ಹೆಚ್ಚಿನ ಸಮಯದಿಂದ ವಿವಿಧ ಹೈಕೋರ್ಟ್‌ಗಳಲ್ಲಿ 71,204 ಪ್ರಕರಣಗಳು ಬಾಕಿಯಾಗಿವೆ ಎಂದು ಸಚಿವರು ನುಡಿದರು. ಅದೇ ರೀತಿ, ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ, 30 ವರ್ಷಗಳಿಗಿಂತಲೂ ಹಿಂದಿನ 1,01,837 ಪ್ರಕರಣಗಳು ಇವೆ ಎಂದರು.

ದೇಶದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳ ಸಂಖ್ಯೆ ಐದು ಕೋಟಿಯನ್ನು ಮೀರಿದೆ ಎಂದು ಮೇಘವಾಲ್ ಜುಲೈ 20ರಂದು ರಾಜ್ಯಸಭೆಯಲ್ಲಿ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News