ಅಮೆರಿಕದ ಇಯೊವಾದಲ್ಲಿ ಬಿರುಗಾಳಿಯ ಆರ್ಭಟ | ವ್ಯಾಪಕ ಹಾನಿ, ಸಾವು ನೋವು

Update: 2024-05-22 17:30 GMT

PC : NDTV 

ರೀನ್‌ಫೀಲ್ಡ್, : ಅಮೆರಿಕದ ಇಯೊವಾ ರಾಜ್ಯದ ಪುಟ್ಟ ಪಟ್ಟಣವಾದ ಗ್ರೀನ್‌ಫೀಲ್ಡ್‌ ನಲ್ಲಿ ಮಂಗಳವಾರ ಬೀಸಿದ ಭೀಕರ ಬಿರುಗಾಳಿಗೆ ಹಲವಾರು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಹಲವಾರು ಮನೆಗಳು ಕುಸಿದುಬಿದ್ದಿದ್ದು, ಕಾರು ಮತ್ತಿತರ ವಾಹನಗಳು ಚೆಲ್ಲಾಪಿಲ್ಲಿಯಾಗಿ ಚದುರಿಬಿದ್ದಿವೆ.

ಸುಮಾರು 2 ಸಾವಿರ ಜನಸಂಖ್ಯೆಯ ಗ್ರೀನ್‌ಫೀಲ್ಡ್ ಪಟ್ಟಣವನ್ನು ವ್ಯಾಪಕ ವಿನಾಶವನ್ನುಂಟು ಮಾಡಿದ ಬಿರುಗಾಳಿ ಆನಂತರ ಪೂರ್ವಾಭಿಮುಖವಾಗಿ ಚಲಿಸಿದ್ದು, ಇಲಿನಾಯ್ಸ್ ಹಾಗೂ ವಿಸ್ಕೊನ್‌ಸಿನ್ ರಾಜ್ಯಗಳ ಹಲವು ಭಾಗಗಳಲ್ಲಿ ಹಾವಳಿಯೆಬ್ಪಿಸಿದೆ. ಈ ಎರಡೂ ರಾಜ್ಯಗಳ ಹಲವೆಡೆ ವಿದ್ಯುತ್‌ಕಂಬಗಳು ಉರುಳಿಬಿದ್ದಿದ್ದು, ಸಾವಿರಾರು ಜನರು ವಿದ್ಯುತ್ ಇಲ್ಲದೆಯೇ ದಿನಕಳೆಯಬೇಕಾಯಿತು.

ಗ್ರೀನ್‌ಫೀಲ್ಡ್‌ ನಲ್ಲಿ ಬಿರುಗಾಳಿಯ ಹೊಡೆತಕ್ಕೆ ಆಸ್ಪತ್ರೆಯೊಂದು ಧರಾಶಾಯಿಯಾಗಿದ್ದು 12 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆನಂತರ ಬೇರೊಂದು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆಯೆಂದು ಇಯೊವಾ ರಾಜ್ಯದ ಗಸ್ತುದಳದ ಸಾರ್ಜಂಟ್ ಅಲೆಕ್ಸ್ ಡಿಂಕ್ಲಾ ತಿಳಿಸಿದ್ದಾರೆ.

ಬಿರುಗಾಳಿಯ ಹಾವಳಿಗೆ ಸಾವುಗಳು ಸಂಭವಿಸಿರುವುದು ದೃಢಪಟ್ಟಿದೆಯೆಂದು ಅವರು ಹೇಳಿದ್ದಾರೆ. ಬಿರುಗಾಳಿ ಹಾವಳಿಯ ನಂತರ ನಾಪತ್ತೆಯಾದವರಿದ್ದರೆ ಆ ಬಗ್ಗೆ ವರದಿಯೂ ನೀಡುವಂತೆಯೂ ಅವರು ಸ್ಥಳೀಯರಿಗೆ ಮನವಿ ಮಾಡಿದ್ದಾರೆ.

ಮಂಗಳವಾರದಂದು ಅಮೆರಿಕದ ಹಲವಾರು ರಾಜ್ಯಗಳಲ್ಲಿ ಬಿರುಗಾಳಿ, ಮಳೆಯಾಗಿರುವ ಬಗ್ಗೆ ವರದಿಯಾಗಿರುವುದಾಗಿ ರಾಷ್ಟ್ರೀಯ ಹವಾಮಾನ ಸೇವಾ ಇಲಾಖೆ ತಿಳಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News