ವಾಟ್ಸ್ ಆ್ಯಪ್ ಪೋಸ್ಟ್ ನಲ್ಲಿ ಪ್ರವಾದಿ ನಿಂದನೆ ಆರೋಪ; 22 ವರ್ಷದ ವಿದ್ಯಾರ್ಥಿಗೆ ಮರಣದಂಡನೆ !

Update: 2024-03-11 04:28 GMT

ಇಸ್ಲಾಮಾಬಾದ್: ಪ್ರವಾದಿ ಮುಹಮ್ಮದರ ವಿರುದ್ಧ ಅವಹೇಳನಕಾರಿ ಬರಹ ಮತ್ತು ವಿಡಿಯೊವನ್ನು ವಾಟ್ಸ್ ಆ್ಯಪ್ ನಲ್ಲಿ ಪೋಸ್ಟ್ ಮಾಡಿದ ಆರೋಪದಲ್ಲಿ 22 ವರ್ಷದ ವಿದ್ಯಾರ್ಥಿಯೊಬ್ಬನಿಗೆ ಪಾಕಿಸ್ತಾನ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ. ಇದೇ ಪ್ರಕರಣದಲ್ಲಿ 17 ವರ್ಷದ ಮತ್ತೊಬ್ಬ ಯುವಕನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಬಿಬಿಸಿ ವರದಿಯ ಪ್ರಕಾರ, ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ವಾಟ್ಸ್ ಆ್ಯಪ್ ಮೆಸೇಜ್ ನಲ್ಲಿ ಅವಹೇಳನಕಾರಿ ಚಿತ್ರ ಮತ್ತು ವಿಡಿಯೊಗಳನ್ನು ಪಸರಿಸಲಾಗಿದೆ ಎಂದು ಪಂಜಾಬ್ ಪ್ರಾಂತೀಯ ಕೋರ್ಟ್ ತೀರ್ಪಿನಲ್ಲಿ ಹೇಳಿದೆ.

ಪಾಕಿಸ್ತಾನದಲ್ಲಿ ಧರ್ಮನಿಂದನೆಗೆ ಮರಣ ದಂಡನೆ ವಿಧಿಸಬಹುದಾಗಿದೆ. ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆ (ಎಫ್ಐಎ) ಯ ಸೈಬರ್ ಅಪರಾಧ ಘಟಕ ಲಾಹೋರ್ ನಲ್ಲಿ 2022ರಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿತ್ತು. ಮೂರು ಬೇರೆ ಬೇರೆ ಮೊಬೈಲ್ ಗಳಿಂದ ವಿಡಿಯೊ ಮತ್ತು ಫೋಟೊಗಳು ಪ್ರಸಾರವಾಗಿವೆ ಎಂದು ಅರ್ಜಿದಾರರು ಹೇಳಿದ್ದರು. ಈ ಪ್ರಕರಣವನ್ನು ಗುಜ್ರಾನ್ ವಾಲಾ ಕೋರ್ಟ್ ಗೆ ನೀಡಲಾಗಿತ್ತು.

ಅರ್ಜಿದಾರರ ಫೋನ್ ಪರಿಶೀಲನೆ ನಡೆಸಿದ ಎಫ್ಐಎ, ಇಂತಹ ಅಂಶಗಳನ್ನು ಆರೋಪಿಯೇ ಪಸರಿಸಿದ್ದಾಗಿ ದೃಢಪಡಿಸಿದೆ. ಕಿರಿಯ ಆರೋಪಿಗೆ ಅಪ್ರಾಪ್ತ ಎಂಬ ಕಾರಣಕ್ಕೆ ಮರಣ ದಂಡನೆಯ ಬದಲಾಗಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News