ಅಮೆರಿಕದಲ್ಲಿ ಚಂಡಮಾರುತದ ಅಬ್ಬರ: 18 ಮಂದಿ ಸಾವು
Update: 2024-05-27 16:23 GMT
ನ್ಯೂಯಾರ್ಕ್: ಅಮೆರಿಕದ ದಕ್ಷಿಣ ಬಯಲು ಪ್ರದೇಶಗಳು ಮತ್ತು ಒಝಾರ್ಕ್ ಪರ್ವತ ಪ್ರದೇಶಗಳಲ್ಲಿ ತೀವ್ರ ಚಂಡಮಾರುತದ ಅಬ್ಬರಕ್ಕೆ ಸಿಲುಕಿ 4 ಮಕ್ಕಳ ಸಹಿತ ಕನಿಷ್ಟ 14 ಮಂದಿ ಸಾವನ್ನಪ್ಪಿದ್ದು ನೂರಾರು ಕಟ್ಟಡಗಳು ಧ್ವಂಸಗೊಳಿಸಿದೆ. ಕೆಂಟುಕಿ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಸೋಮವಾರ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಮುಂದಿನ ದಿನಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಮಿಸಿಸಿಪ್ಪಿ, ಓಹಿಯೊ ಮತ್ತು ಟೆನ್ನೆಸಿ ನದಿ ಕಣಿವೆಯಲ್ಲಿ ಸುಂಟರಗಾಳಿಯಿಂದ ವ್ಯಾಪಕ ಹಾನಿಯಾಗಿದ್ದು 4.7 ದಶಲಕ್ಷ ಜನತೆಯ ಮೇಲೆ ಪರಿಣಾಮ -ಬೀರಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.