ಅಮೆರಿಕ | ಡೆಲ್ಟಾ ವಿಮಾನದ ಟಯರ್ ಸ್ಫೋಟ : ಇಬ್ಬರು ಮೃತ್ಯು
Update: 2024-08-27 17:18 GMT
ನ್ಯೂಯಾರ್ಕ್ : ಅಮೆರಿಕದ ಜಾರ್ಜಿಯಾ ರಾಜ್ಯದ ಅಟ್ಲಾಂಟಾದಲ್ಲಿರುವ ಹಾಟ್ರ್ಸ್ಫೀಬಲ್ಡ್-ಜಾಕ್ಸನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ಏರ್ ಲೈನ್ಸ್ ವಿಮಾನದ ಟಯರ್ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿದ್ದು ಮತ್ತೊಬ್ಬ ವ್ಯಕ್ತಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಮಂಗಳವಾರ ಬೆಳಿಗ್ಗೆ ವಿಮಾನ ನಿಲ್ದಾಣದ ನಿರ್ವಹಣಾ ಪ್ರದೇಶದಲ್ಲಿ ವಿಮಾನದ ಟಯರ್ ಸ್ಫೋಟಗೊಂಡಿದ್ದು ಡೆಲ್ಟಾ ಏರ್ಲೈಾನ್ಸ್ನಮ ಉದ್ಯೋಗಿ ಹಾಗೂ ಓರ್ವ ಕಂಟ್ರಾಕ್ಟರ್ ಮೃತಪಟ್ಟಿದ್ದಾರೆ. ಡೆಲ್ಟಾ ಏರ್ ಲೈನ್ಸ್ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.