ಅಮೆರಿಕ | ಖಾಲಿಸ್ತಾನ್ ಕಾರ್ಯಕರ್ತ ಕಮಲ್ ಸಿಂಗ್ ಸೂರ್ಮ

Update: 2024-05-18 15:55 GMT

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಖಾಲಿಸ್ತಾನ್ ಕಾರ್ಯಕರ್ತ ಕಮಲ್ ಸಿಂಗ್ ಸೂರ್ಮನನ್ನು ಭಾರೀ ಪ್ರಮಾಣದ ಮಾದಕವಸ್ತು ಸಂಗ್ರಹದೊಂದಿಗೆ ಬಂಧಿಸಿರುವುದಾಗಿ ಅಮೆರಿಕದ ಪೊಲೀಸರು ಹೇಳಿದ್ದಾರೆ.

1.5 ದಶಲಕ್ಷ ಡಾಲರ್ ಮೌಲ್ಯದ 50 ಕಿ.ಗ್ರಾಂ. ಕೊಕೇನ್ ಅನ್ನು ಕಳ್ಳಸಾಗಣೆ ಮಾಡುತ್ತಿದ್ದ ಸಂದರ್ಭ ಕಮಲ್ ಸಿಂಗ್ ರೆಡ್‍ಹ್ಯಾಂಡ್ ಆಗಿ ಸೆರೆಸಿಕ್ಕಿದ್ದಾನೆ. ಬಂಧನವನ್ನು ತಪ್ಪಿಸಿಕೊಳ್ಳಲು ಕಮಲ್‍ಸಿಂಗ್ ಪ್ರಜ್ಞಾಹೀನನಾದಂತೆ ನಾಟಕ ಮಾಡಿದ್ದಾನೆ. ಭಾರತ ವಿರೋಧಿ ಚಟುವಟಿಕೆಗೆ ಧನಸಹಾಯ ಮಾಡುವ ಪಾಕಿಸ್ತಾನದ ಗುಪ್ತಚರ ಏಜೆನ್ಸಿ ಐಎಸ್‍ಐಗೆ ಸಂಬಂಧಿಸಿದ ಪ್ರಕರಣ ಇದಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಅಮೆರಿಕ ಮತ್ತು ಕೆನಡಾದಲ್ಲಿ ಖಾಲಿಸ್ತಾನ್ ಚಟುವಟಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ಪ್ರಕರಣ ನಡೆದಿದ್ದು ಅಮೆರಿಕದ ನೆಲದಲ್ಲಿ ಭಾರತ ವಿರೋಧಿ ಚಟುವಟಿಕೆಯ ಬಗ್ಗೆ ಭಾರತದ ರಾಜತಾಂತ್ರಿಕ ಸಮುದಾಯ ತೀವ್ರ ಕಳವಳ ವ್ಯಕ್ತಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News