ಏಶ್ಯಾದ ಪ್ರಥಮ ಮಾರಣಾಂತಿಕ ಎಂಪಾಕ್ಸ್ ಸೋಂಕು ಪ್ರಕರಣ ಥೈಲ್ಯಾಂಡ್‍ನಲ್ಲಿ ಪತ್ತೆ

Update: 2024-08-22 15:59 GMT

ಸಾಂದರ್ಭಿಕ ಚಿತ್ರ

ಬ್ಯಾಂಕಾಕ್ : ಏಶ್ಯಾದ ಪ್ರಥಮ ಮಾರಣಾಂತಿಕ ಎಂಪಾಕ್ಸ್ ವೈರಸ್ ತಳಿ ಥೈಲ್ಯಾಂಡ್‍ನ ವ್ಯಕ್ತಿಯಲ್ಲಿ ದೃಢಪಟ್ಟಿರುವುದಾಗಿ ವರದಿಯಾಗಿದೆ.

ಆಫ್ರಿಕಾದಿಂದ ಬ್ರಿಟನ್‍ಗೆ ಪ್ರಯಾಣಿಸಿ ಅಲ್ಲಿಂದ ಆಗಸ್ಟ್ 14ರಂದು ಬ್ಯಾಂಕಾಕ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದ ವ್ಯಕ್ತಿಯನ್ನು ಪರೀಕ್ಷೆ ನಡೆಸಿದಾಗ ಎಂಪಾಕ್ಸ್ ಸೋಂಕು ಪತ್ತೆಯಾಗಿತ್ತು. ಪ್ರಯೋಗಾಲಯಗಳಲ್ಲಿ ಹಲವು ಪರೀಕ್ಷೆಗಳ ಬಳಿಕ ಈತ ಎಂಪಾಕ್ಸ್ ಕ್ಲಾಡ್ 1ಬಿ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ. ಈತನ ಜತೆ ನಿಕಟ ಸಂಪರ್ಕದಲ್ಲಿದ್ದ 43 ಜನರ ಮೇಲೆ ನಿಗಾ ಇರಿಸಲಾಗಿದ್ದು ಇದುವರೆಗೆ ಯಾವುದೇ ರೋಗ ಲಕ್ಷಣ ವರದಿಯಾಗಿಲ್ಲ. 21 ದಿನ ಅವರ ಮೇಲೆ ನಿಗಾ ಮುಂದುವರಿಸಲಾಗುವುದು ಎಂದು ಥೈಲ್ಯಾಂಡ್‍ನ ರೋಗ ನಿಯಂತ್ರಣ ಇಲಾಖೆಯ ಅಧಿಕಾರಿ ಹೇಳಿದ್ದಾರೆ.

2022ರಿಂದ ಥೈಲ್ಯಾಂಡ್‍ನಲ್ಲಿ ಎಂಪಾಕ್ಸ್ ಕ್ಲಾಡ್2 ಸೋಂಕಿನ 800 ಪ್ರಕರಣ ಪತ್ತೆಯಾಗಿದೆ. ಆದರೆ ಎಂಪಾಕ್ಸ್ ಕ್ಲಾಡ್ 1ಬಿ ತಳಿ ಇದೇ ಮೊದಲ ಬಾರಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News