ಹಿಝ್ಬುಲ್ಲಾ ಮೇಲೆ ಇಸ್ರೇಲ್ ದಾಳಿ: ಕನಿಷ್ಠ 500 ಮಂದಿ ಮೃತ್ಯು

Update: 2024-09-24 07:50 GMT

PC: x.com/HarunMaruf

ಲೆಬನಾನ್: ಇರಾನ್ ಬೆಂಬಲಿತ ಹಿಝ್ಬುಲ್ಲಾ ಹೋರಾಟಗಾರರನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ಅತಿದೊಡ್ಡ ವಾಯುದಾಳಿಯಲ್ಲಿ ಕನಿಷ್ಠ 500 ಮಂದಿ ಮೃತಪಟ್ಟಿದ್ದಾರೆ. ಗಾಝಾ ಯುದ್ಧ ಆರಂಭವಾದ ಬಳಿಕ ಅಂದರೆ ಕಳೆದ ಅಕ್ಟೋಬರ್ 7ರ ಬಳಿಕ ದಕ್ಷಿಣ ಲೆಬನಾನ್ ಮೇಲೆ ನಡೆದ ಅತಿದೊಡ್ಡ ದಾಳಿ ಇದಾಗಿದೆ.

ದಾಳಿಯಲ್ಲಿ ಕನಿಷ್ಠ 1650 ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟರಲ್ಲಿ 100ಕ್ಕೂ ಹೆಚ್ಚು ಮಂದಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಹೇಳಿದೆ.

ಹಿಝ್ಬುಲ್ಲಾ ಹೋರಾಟಗಾರರು ಇಸ್ರೇಲ್‍ನ ಉತ್ತರದ ಗಡಿಯಲ್ಲಿ ಪ್ರತಿದಿನ ಸಣ್ಣ ಪುಟ್ಟ ಸಂಘರ್ಷದಲ್ಲಿ ತೊಡಗಿದ್ದು, ನೂರಾರು ರಾಕೆಟ್‍ಗಳ ಮೂಲಕ ದಾಳಿ ನಡೆಸುತ್ತಿದ್ದಾರೆ. ಫೆಲಸ್ತೀನಿಯರ ಪರವಾಗಿ ಹಾಗೂ ಇಸ್ರೇಲ್‍ನ ಕ್ರೂರ ಮಿಲಿಟರಿ ಕಾರ್ಯಾಚರಣೆಯನ್ನು ವಿರೋಧಿಸಿ ಹಿಝ್ಬುಲ್ಲಾ ಈ ದಾಳಿ ನಡೆಸುತ್ತಾ ಬಂದಿದೆ.

ಇಸ್ರೇಲ್ ಕಳೆದ ಜುಲೈನಲ್ಲಿ ದಾಳಿ ನಡೆಸಿ ಹಿಝ್ಬುಲ್ಲಾ ಕಮಾಂಡರ್ ಫೌದ್ ಶುಕ್ರ್ ಅವರನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಸಂಘಟನೆ 100ಕ್ಕೂ ಹೆಚ್ಚು ರಾಕೆಟ್ ದಾಳಿ ನಡೆಸಿತ್ತು. ಲೆಬನಾನ್‍ನಲ್ಲಿ ನಡೆದ ಸರಣಿ ಪೇಜರ್ ಸ್ಫೋಟಕ್ಕೆ ಇಸ್ರೇಲ್ ಹೊಣೆ ಎಂದು ಹಿಝ್ಬುಲ್ಲಾ ಆಪಾದಿಸಿತ್ತು.

Full View

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News