ಬಾಂಗ್ಲಾ ಟಿವಿ ಸುದ್ದಿವಾಹಿನಿ | ಕಟ್ಟಡಕ್ಕೆ ಉದ್ರಿಕ್ತ ಗುಂಪಿನಿಂದ ಬೆಂಕಿ

Update: 2024-07-18 16:05 GMT

ಸಾಂದರ್ಭಿಕ ಚಿತ್ರ

ಢಾಕಾ : ಮೀಸಲಾತಿ ವಿರೋಧಿ ಪ್ರತಿಭಟನಕಾರರು ಗುರುವಾರ ಸಂಜೆ ಬಾಂಗ್ಲಾದ ಸರಕಾರಿ ಸ್ವಾಮ್ಯದ ಸುದ್ದಿವಾಹಿನಿ ಬಿಟಿವಿಯ ಕಾರ್ಯಾಲಯಕ್ಕೆ ಬೆಂಕಿ ಹಚ್ಚಿದ್ದು, ಹಲವಾರು ಮಂದಿ ಕಟ್ಟಡದೊಳಗೆ ಸಿಲುಕಿಕೊಂಡಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

ನೂರಾರು ಪ್ರತಿಭಟನಕಾರರು ಬಿಟಿವಿಯ ಆವರಣಕ್ಕೆ ನುಗ್ಗಿದ್ದು, ಅಲ್ಲಿ ನಿಲ್ಲಿಸಲಾಗಿದ್ದ ಕನಿಷ್ಠ 60 ವಾಹನಗಳು ಹಾಗೂ ಕಚೇರಿಯ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆಂದು ನಿಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಾಂಧಲೆ ನಿರತ ಪ್ರತಿಭಟನಕಾರರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದಾಗ ಉದ್ರಿಕ್ತ ಗುಂಪೊಂದು ಢಾಕಾದ ಉಪನಗರ ರಾಮಪುರದಲ್ಲಿರುವ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿತು. ಆಗ ಪೊಲೀಸರು ಪ್ರತಿಭಟನಕಾರರನ್ನು ಬೆನ್ನಟ್ಟಿಕೊಂಡು ಹೋದಾಗ ಅವರು ಬಿಟಿವಿ ಕಚೇರಿಯೊಳಗೆ ನುಗ್ಗಿದ್ದು, ಅಲ್ಲಿ ಅವರು ಬೆಂಕಿ ಹಚ್ಚಿದರು ಎಂದು ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಅಗ್ನಿಶಾಮಕದಳ ಸ್ಥಳಕ್ಕೆ ಧಾವಿಸಿದ್ದು, ಬಿಟಿವಿ ಕಟ್ಟಡಕ್ಕೆ ತಗಲಿದ ಬೆಂಕಿಯನ್ನು ನಂದಿಸುವಲ್ಲಿ ಸಫಲವಾಗಿದೆ .ಕಟ್ಟಡದೊಳಗೆ ಹಲವಾರು ಮಂದಿ ಸಿಕ್ಕಿಹಾಕಿಕೊಂಡಿದ್ದರೆಂದು ಮೂಲಗಳು ತಿಳಿಸಿವೆ.

ಕಳೆದ ತಿಂಗಳು ಉಕ್ರೇನ್ ಅಮೆರಿಕದ ಕ್ಷಿಪಣಿಗಳನ್ನು ಬಳಸಿಕೊಂಡು ಕ್ರಿಮಿಯಾದ ಮೇಲೆ ನಡೆಸಿದ ಭೀಕರ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ ನಾಲ್ವರು ಮೃತಪಟ್ಟಿದ್ದರು ಹಾಗೂ 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರೆಂದು ರಶ್ಯ ಆಪಾದಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News